ಶಿರಾಡಿ ಸ್ಕೂಟಿ,ಕಾರು ಡಿಕ್ಕಿ; ಸ್ಕೂಟಿ ಸವಾರ ಮೃತ್ಯು

ಶೇರ್ ಮಾಡಿ

ನೆಲ್ಯಾಡಿ: ಮಂಗಳೂರು -ಬೆಂಗಳೂರು ರಸ್ತೆ ಹೆದ್ದಾರಿ 75ರ ಶಿರಾಡಿ ಎಂಬಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ಶಿರಾಡಿ ಗ್ರಾಮದ ಕೋಟಾಯಿಲ್ ನಿವಾಸಿ ಜೋನ್(56) ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕಾರು ಹಾಗೂ ಶಿರಾಡಿಯಿಂದ ಕೋಟಾಯಿಲ್ ಮನೆ ತೆರಳುತ್ತಿದ್ದ ಸ್ಕೂಟಿಯ ನಡುವೆ ಅಪಘಾತ ಸಂಭವಿಸಿದೆ.

ಘಟನೆ ನಡೆದ ಸಂದರ್ಭ ಅದೇ ಮಾರ್ಗವಾಗಿ ಬರುತ್ತಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತನ್ನ ಬೆಂಗಾವಲು ವಾಹನದಲ್ಲಿ ಗಾಯಾಳುವನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಜೋನ್ ಅವರು ತಂದೆ ಜೋಸೆಫ್ ಕೊಟ್ಟಾಯಿಲ್, ಪತ್ನಿ ಮೋಳಿ, ಪುತ್ರಿಯರಾದ ಸಾನಿಯಾ, ಶಾನಿ, ಶೀನಾ ಹಾಗೂ ಪುತ್ರ ಶ್ಯಾಮ್ ಅವರನ್ನು ಅಗಲಿದ್ದಾರೆ.

  •  

Leave a Reply

error: Content is protected !!