ತಿರ್ಲೆಯಲ್ಲಿ ಧರ್ಮದ ತಿರುಳು, ಸಂಸ್ಕøತಿಯ ಪೊರ್ಲು ಅನಾವರಣವಗೊಂಡಿದೆ: ಒಡಿಯೂರು ಶ್ರೀ
ತಿರ್ಲೆಯಲ್ಲಿ ದೇವಲೋಕವೇ ಸೃಷ್ಟಿಯಾಗಿದೆ; ಶ್ರೀ ಡಾ|ಧರ್ಮಪಾಲನಾಥ ಸ್ವಾಮೀಜಿ

ನೆಲ್ಯಾಡಿ: ತಿರ್ಲೆಯಲ್ಲಿ ಧರ್ಮದ ತಿರುಳು, ಸಂಸ್ಕøತಿಯ ಪೊರ್ಲು ಅನಾವರಣಗೊಂಡಿದೆ. ಊರಿನ ದೇವಾಲಯದ ಜೀರ್ಣೋದ್ದಾರ ಆಗದೇ ಇದ್ದಲ್ಲಿ ಊರಿನವರಿಗೆ ತೊಂದರೆ ಆಗಲಿದೆ. ಭಾರತ ವಿಶ್ವಕ್ಕೆ ಹೃದಯವಿದ್ದಂತೆ. ಭಾರತದ ಆಧ್ಯಾತ್ಮಿಕತೆಯನ್ನು ವಿಶ್ವವೇ ಕೊಂಡಾಡಿದೆ ಎಂದು ನುಡಿದರು. ಧಾರ್ಮಿಕ ಶಿಕ್ಷಣ ಕೇಂದ್ರಗಳ ಮೂಲಕ ಧಾರ್ಮಿಕ ಶಿಕ್ಷಣ ಸಿಗಬೇಕು. ಈಶ ಪ್ರೇಮದ ಜೊತೆಗೆ ದೇಶ ಕಟ್ಟುವ ಕೆಲಸವೂ ಆಗಬೇಕು. ಮಕ್ಕಳು, ಯುವಜನತೆ, ತಾಯಂದಿರು ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಧಾಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀಮಹಾ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಹೇಳಿದರು.
ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಬ್ರಹ್ಮಕಲಶೋತ್ಸವದ ಮೂಲಕ ತಿರ್ಲೆಯಲ್ಲಿ ದೇವಲೋಕವೇ ಸೃಷ್ಟಿಯಾಗಿದೆ. ಭಕ್ತಿ, ಶ್ರದ್ಧೆ, ನಂಬಿಕೆ, ವಿಶ್ವಾಸದೊಂದಿಗೆ ನನ್ನದು, ನಮ್ಮ ದೇವಸ್ಥಾನ ಎಂಬ ಭಾವನೆ ಭಕ್ತರಲ್ಲಿ ಕಾಣಿಸಿಕೊಂಡಿದೆ ಎಂದು ನುಡಿದರು. ನಶಿಸಿ ಹೋಗಿರುವ ಅನೇಕ ದೇವಸ್ಥಾನ, ಮಠಗಳು ಪುನವೀಕರಣಗೊಳ್ಳುವ ಮೂಲಕ ಧರ್ಮಜಾಗೃತಿಯಾಗುತ್ತಿದೆ. ದೇವಸ್ಥಾನಗಳು ಧರ್ಮಜಾಗೃತಿಯ ಸಂಕೇತವಾಗಿದೆ. ಮನುಷ್ಯನ ಬದುಕೇ ಅನ್ವೇಷಣೆಯಾಗಿದೆ. ದೇವಸ್ಥಾನಗಳ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು ಹೇಳಿದರು.

ಅತಿಥಿಯಾಗಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆದ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವರಾದ ಬಿ.ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕ್ಕಳ, ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಆಲಂಕಾರು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಬೆಂಗಳೂರಿನ ಉದ್ಯಮಿ ಅಜಿತ್ ರೈ ಮನವಳಿಕೆ ಸಂದರ್ಭೋಚಿತವಾಗಿ ಮಾತನಾಡಿದರು.
ಉಳ್ಳಾಲ ಶ್ರೀ ಅಂಬಾವನ ಧರ್ಮಶಿಕ್ಷಣ ಕೇಂದ್ರದ ಪ್ರಧಾನ ಸಂಚಾಲಕ ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ ಮೈಸೂರು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಮೃದಂಗ ವಿದ್ವಾನ್ ಕೆ.ವಿ.ಕಾರಂತ್ ಕಾಂಚನ, ಉಪ್ಪಿನಂಗಡಿ ಗಿರಿಜಾ ಕ್ಲಿನಿಕ್‍ನ ದಂತ ವೈದ್ಯರಾದ ಡಾ.ರಾಜಾರಾಮ್ ಕೆ.ಬಿ., ಹೇಮಾವತಿ ಸುಬ್ಬರಾವ್ ಕಾಂಚನ, ಬೆಂಗಳೂರಿನ ಉದ್ಯಮಿ ನಟೇಶ್ ಪೂಜಾರಿ, ಕಾಂಚನ ಶಾಲಾ ನಿವೃತ್ತ ಮುಖ್ಯಶಿಕ್ಷಕ ಸೂರ್ಯಪ್ರಕಾಶ್ ಉಡುಪ, ಉದ್ಯಮಿ ಬಾಲಕೃಷ್ಣ ನೈಮಿಷ ಕೊಕ್ಕಡ, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯರಾದ ನೋಣಯ್ಯ ಗೌಡ ಡೆಬ್ಬೇಲಿ, ಹೇಮಲತಾ ಮುರಿಯೇಲು, ಜಾನಕಿ ನೆಕ್ಕರೆ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ, ಬ್ರಹ್ಮಕಲಶೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ಸುರೇಶ್ ತಿರ್ಲೆ, ಪ್ರಚಾರ ಸಮಿತಿ ಸಂಚಾಲಕ ರಾಜಶೇಖರ್ ಹೊಸಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಬಾಲಚಂದ್ರ ರೈ ಪಾತೃಮಾಡಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಲಾವಣ್ಯ ಸಂದೇಶ್ ವಂದಿಸಿದರು. ಬಲ್ಮಠ ಸರಕಾರಿ ಪ.ಪೂ.ಕಾಲೇಜಿನ ಅಧ್ಯಾಪಕ ಮುರಳಿಕೃಷ್ಣ ಆಚಾರ್ ನಿರೂಪಿಸಿದರು. ವೀಣಾರಾಮಕೃಷ್ಣ ಭಟ್ ಆಂಜರ, ಉಷಾಪಾರ್ವತಿ, ವೈಶಾಲ್ಯ, ಶುಭಲಕ್ಷ್ಮೀ ಪ್ರಾರ್ಥಿಸಿದರು.
ವೈದಿಕ ಕಾರ್ಯಕ್ರಮ:
ಬೆಳಿಗ್ಗೆ ಉಷಾ:ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಸಂಹಾರ ತತ್ತ್ವಹೋಮ, ತತ್ತ್ವ ಕಲಶ ಪೂಜೆ, ಮಹಾಪೂಜೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರಿ ಪೂಜೆ, ಅಗ್ನಿ ಜನನ, ಶಿರಸ್ಥಾನ, ತತ್ವಹೋಮ, ನಿದ್ರಾಕಶಲ ಪೂಜೆ, ಶಯ್ಯಾಪೂಜೆ, ವಿದ್ಯೇಶ್ವರ ಕಲಶ ಪೂಜೆ, ವಿದ್ವತ್ ಪ್ರಾರ್ಥನೆ, ಸಂಹಾರ ತತ್ತ್ವಕಲಶಾಭಿಷೇಕ, ಧ್ಯಾನ ಸಂಕೋಚ ಕ್ರಿಯೆ, ಜೀವ ಕಲಶ ಪೂಜೆ, ಜೀವೋದ್ವಾಸನ ಕ್ರಿಯೆ, ಮಂಟಪ ಸಂಸ್ಕಾರ, ಕುಂಭೇಶ ಕರ್ಕರೀ ಪೂಜೆ, ಅಗ್ನಿಜನನ ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ ನಡೆಯಿತು. ಮಧ್ಯಾಹ್ನ ಜೀವಕಲಶ ಶಯ್ಯಾರೋಪಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಶುದ್ಧಿ ಕಲಶಾಭಿಷೇಕ, ಧ್ಯಾನಾಧಿವಾಸ, ಪೀಠಾಧಿವಾಸ, ಅಧಿವಾಸ ಹೋಮ, ಚಕ್ರಾಬ್ಧ ಮಂಡಲ ಪೂಜೆ, ಅಧಿವಾಸಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಭಜನೆ:
ಬೆಳಿಗ್ಗೆ ಕುಂತೂರು ಶ್ರೀ ಶಾರದಾ ಭಜನಾ ಮಂಡಳಿ, ಹಿರೇಬಂಡಾಡಿ ಉದಯಗಿರಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ, ಸಂಜೆ ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯ, ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.





