

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹಾಗೂ ಬಂದಾರು ಗ್ರಾಮಗಳನ್ನು ಸಂಪರ್ಕಿಸುವಂತೆ ಮೈಪಾಲದಲ್ಲಿ ರೂ.72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೈಪಾಲ ಸೇತುವೆ ಹಾಗೂ ಕಿಂಡಿ ಆಣೆಕಟ್ಟು ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ವೀಕ್ಷಿಸಿದರು. ಈ ಮಹತ್ವದ ಯೋಜನೆಯ ಪ್ರಗತಿ ಬಗ್ಗೆ ಸ್ಥಳದಲ್ಲೇ ಪರಿಶೀಲನೆ ನಡೆಸಿದ ಅವರು ಕಾಮಗಾರಿಯ ಗತಿ ಮತ್ತು ಗುಣಮಟ್ಟದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಕೊಕ್ಕಡ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಯೋಗೀಶ್ ಆಳಂಬಿಲ, ಕೊಕ್ಕಡ ಪಂಚಾಯತಿ ಸದಸ್ಯ ವಿಶ್ವನಾಥ, ಬಿಜೆಪಿ ಎಸ್.ಟಿ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮಹಾಬಲ ಗೌಡ ಬಂದಾರು, ಬೆಳ್ತಂಗಡಿ ಎ.ಪಿ.ಎಮ್.ಸಿ ಮಾಜಿ ನಿರ್ದೇಶಕ ಹೊನ್ನಪ್ಪ ಗೌಡ ಸೋಣಕುಮೇರು, ಸ್ಥಳೀಯ ಮುಖಂಡ ತಿಮ್ಮಪ್ಪ ಮೈಪಾಲ, ಮಾದಪ್ಪ ಕುರ್ಲೆ ಸೇರಿದಂತೆ ಅನೇಕ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸೇತುವೆ ಪೂರ್ಣಗೊಂಡ ನಂತರ ಕೊಕ್ಕಡ ಮತ್ತು ಬಂದಾರು ಗ್ರಾಮದ ಮಧ್ಯೆ ಉತ್ತಮ ಸಂಪರ್ಕ ದೊರೆಯಲಿದ್ದು, ಜನಜೀವನ ಸುಗಮಗೊಳ್ಳಲಿದೆ.






