

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನಿವೃತ್ತ ಪ್ರಾಥಮಿಕ ಅರೋಗ್ಯ ಅಧಿಕಾರಿಯಾಗಿರುವ ಶ್ರೀಮತಿ ಭಾರತಿ ವೆಂಕಟ್ರಮಣ ಗೌಡ ಸ್ಕಂದ ಶ್ರೀನಿವಾಸ ದೊಂಪದಪಲ್ಕೆ, ಇವರನ್ನು ಅಭಿನಂದಿಸಲಾಯಿತು.

ಸುಮಾರು 32 ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ. ಬಂಟ್ವಾಳ ತಾಲೂಕಿನ ಬೋಳಂತೂರು ನಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವೃತ್ತಿ ಜೀವನದಲ್ಲಿ ಮನೆಮನೆಗೆ ಹೋಗಿ 5 ವರ್ಷದಲ್ಲಿ 500 ಗರ್ಭಿಣಿಯರ ಹೆರಿಗೆಯನ್ನು ಮನೆಯಲ್ಲಿಯೇ ಅವರ ಕೈಯ್ಯಾರೆ ಹೆರಿಗೆ ಮಾಡಿಸಿದ್ದಾರೆ. ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ಸಮಾಜಮುಖಿ ಕೆಲಸವನ್ನು ಮಾಡಿರುತ್ತಾರೆ. ಈ ಕಾರಣದಿಂದ ಇಂತಹ ಒಂದು ಮಹಿಳೆಯನ್ನು ನಮ್ಮ ಮಹಿಳಾಮೋರ್ಚಾದ ಪರವಾಗಿ ಅಭಿನಂದಿಸಿರುವುದು ನಮ್ಮ ಭಾಗ್ಯವೇ ಸರಿ. ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿದ್ಯಾಶ್ರೀನಿವಾಸ್ ಗೌಡ ಇವರು ಮಹಿಳಾ ದಿನಾಚರಣೆಯ ಬಗ್ಗೆ ಮಹಿಳೆಯರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸನ್ಮಾನಿತೆ ತನ್ನ ಜೀವನದಲ್ಲಿ ಪ್ರಥಮವಾಗಿ ಗೌರವಾರ್ಪಣೆ ಸ್ವೀಕರಿಸಿದ ಖುಷಿಯಲ್ಲಿ ಮಹಿಳಾ ಮೋರ್ಚಾಕ್ಕೆ ವಿಶೇಷವಾದ ಅಭಿನಂದನೆ ಸಲ್ಲಿಸಿದರು ಮತ್ತು ಅಂಗಾಂಗ ದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿಯಾದ ಪೂರ್ಣಿಮಾ ಜಯಂತ್, ಉಪಾಧ್ಯಕ್ಷರಾದ ಶಾರದಾ ಚಾರ್ಮಾಡಿ, ಕಾರ್ಯದರ್ಶಿಯಾದ ಶಶಿಕಲಾದೇವಪ್ಪ ಗೌಡ, ಸದಸ್ಯರಾದ ಸವಿತ ಕುಲಾಲ್, ರೈತ ಮೋರ್ಚಾ ಸದಸ್ಯೆ ಶ್ರೀಮತಿ ಅಶ್ವಿನಿ ಹೆಬ್ಬಾರ್ ಮುಂಡಾಜೆ ಹಾಗೂ ಮಹಿಳಾ ಮೋರ್ಚಾ ಸದಸ್ಯರು ಭಾಗವಹಿಸಿದರು.





