ಇಚಿಲಂಪಾಡಿ ಸಾರಥಿ ಆಟೋ ಚಾಲಕ ಮಾಲಕ ಸಂಘ ಅಸ್ತಿತ್ವಕ್ಕೆ: ನೂತನ ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಆಟೋ ಚಾಲಕರ ಹಿತ ಕಾಯುವ ದೃಷ್ಟಿಯಿಂದ ಇಚಿಲಂಪಾಡಿ ಸಾರಥಿ ಆಟೋ ಚಾಲಕ ಮಾಲಕ ಸಂಘ ಅಸ್ತಿತ್ವಕ್ಕೆ ಬಂದಿದೆ. ಈ ಸಂಘವು ಆಟೋ ಚಾಲಕರ ಹಕ್ಕುಗಳ ರಕ್ಷಣೆ, ಪರಸ್ಪರ ಸಹಕಾರ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶವನ್ನು ಹೊಂದಿದೆ.

ಸಂಘದ ಗೌರವಾಧ್ಯಕ್ಷರಾಗಿ ಭಾಸ್ಕರ ಎಸ್. ಗೌಡ, ಅಧ್ಯಕ್ಷರಾಗಿ ಕೌಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ರೋಯಿ ಪಿ.ಎಂ, ಉಪಾಧ್ಯಕ್ಷರಾಗಿ ರಮೇಶ್ ಗೌಡ, ಕಾರ್ಯದರ್ಶಿಯಾಗಿ ಕೆ. ಮೋನಪ್ಪ ಗೌಡ, ಜೊತ ಕಾರ್ಯದರ್ಶಿಯಾಗಿ ಪ್ರವೀಣ್ ಬಿ., ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ, ಲೆಕ್ಕಪರಿಶೋಧಕರಾಗಿ ಉಣ್ಣಿಟ್ಟ ಎಂ.ಕೆ. ಅವರು ಆಯ್ಕೆಯಾಗಿದ್ದಾರೆ.

ಅಲ್ಲದೆ, ಸಂಘದ ಸದಸ್ಯರಾಗಿ ಕೇಶವ ಕೊರಮೇರು, ಹರಿಪ್ರಸಾದ್, ತಾರನಾಥ, ಶೀನಪ್ಪ ಗೌಡ, ರವಿಕುಮಾರ್, ವಿಶ್ವನಾಥ ಶೆಟ್ಟಿ, ಮೋಕ್ಷಿತ್ ಬಿಜಾರು, ಸಂತೋಷ್, ಇಸುಬು, ಕೇಶವ, ಉದಯಕುಮಾರ್, ಕುಕ್ಕಣ್ಣ ಗೌಡ, ವರ್ಗೀಸ್ ಅವರು ನೇಮಕಗೊಂಡಿದ್ದಾರೆ.

ಈ ನೂತನ ಸಂಘವು ಸ್ಥಳೀಯ ಆಟೋ ಚಾಲಕರ ಹಿತಾಸಕ್ತಿಗಳನ್ನು ಸುಧಾರಿಸುವ ಜೊತೆಗೆ, ಭವಿಷ್ಯದಲ್ಲಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

  •  

Leave a Reply

error: Content is protected !!