

ಕುಕ್ಕೆ ಸುಬ್ರಹ್ಮಣ್ಯ: ಬಾಲಿವುಡ್ನ ಪ್ರಸಿದ್ಧ ನಟಿ ಕತ್ರಿನಾ ಕೈಫ್ ಸ್ನೇಹಿತರೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿ, ಸರ್ಪ ಸಂಸ್ಕಾರ ಸೇವೆ ನೆರವೇರಿಸುತ್ತಿದ್ದಾರೆ. ಇಂದು ಕ್ಷೇತ್ರದಲ್ಲಿ ವಾಸ್ತವ್ಯ ಮಾಡಿರುವ ಅವರು, ಮಾಸ್ಕ್ ಧರಿಸಿ ಮತ್ತು ತಲೆಗೆ ದುಪ್ಪಟ್ಟಾ ಹಾಕಿಕೊಂಡು ದೇವರ ದರ್ಶನ ಪಡೆದರು.

ಕ್ಷೇತ್ರದ ಆದಿ ಸುಬ್ರಹ್ಮಣ್ಯ ಯಾಗಶಾಲೆಯಲ್ಲಿ ಅವರು ಇಂದು ಮತ್ತು ನಾಳೆ ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗವಹಿಸಲಿದ್ದಾರೆ.






