ಉಪ್ಪಿನಂಗಡಿಯಲ್ಲಿ ದುರ್ಘಟನೆ: ಗೋಳಿತೊಟ್ಟಿನ ಯುವಕನ ಮೃತದೇಹ ನದಿಯಲ್ಲಿ ಪತ್ತೆ!

ಶೇರ್ ಮಾಡಿ

ಉಪ್ಪಿನಂಗಡಿ: ಕುಮಾರಧಾರ ನದಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾದ ಘಟನೆ ಮಾ.11ರಂದು ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಗೋಳಿತೊಟ್ಟು ನಿವಾಸಿ ರವಿಚಂದ್ರ ಅವರ ಪುತ್ರ ಗಗನ್(19) ಎಂದು ಗುರುತಿಸಲಾಗಿದೆ. ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ನಿನ್ನೆ ಬಾಡಿಗೆ ಎಂದು ಮನೆಯಿಂದ ತೆರಳಿದರೆಂದು ತಿಳಿಸಿದ್ದಾರೆ. ಆದರೆ ಇಂದು ಬೆಳಿಗ್ಗೆ ಉಪ್ಪಿನಂಗಡಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ತನಿಖೆ ಮುಂದುವರಿಯುತ್ತಿದೆ. ಗಗನ್ ಅವರ ಸಾವಿನ ಹಿಂದಿನ ನಿಜವಾದ ಕಾರಣ ತನಿಖೆ ಬಳಿಕ ತಿಳಿಯಲಿದೆ.

  •  

Leave a Reply

error: Content is protected !!