


ಲಕ್ನೋ: ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ದೇಹವನ್ನು ತುಂಡರಿಸಿ, ಡ್ರಮ್‌ನಲ್ಲಿ ತುಂಬಿ ಸಿಮೆಂಟ್ ಹಾಕಿ ಮುಚ್ಚಿಟ್ಟಿರುವ ಭಯಾನಕ ಘಟನೆ ಉತ್ತರಪ್ರದೇಶದ ಬ್ರಹ್ಮಪುರಿಯ ಇಂದಿರಾ ನಗರದಲ್ಲಿ ಬೆಳಕಿಗೆ ಬಂದಿದೆ.

ಖಾಸಗಿ ಹಡಗು ಕಂಪನಿಯ ಉದ್ಯೋಗಿ ಸೌರಭ್ ರಜಪೂತ್ (29). ಮಾರ್ಚ್ 4 ರಂದು ನಾಪತ್ತೆಯಾಗಿದ್ದ ಸೌರಭ್ ಕುರಿತು ಪೊಲೀಸರು ತನಿಖೆ ನಡೆಸಿದಾಗ, ಪತ್ನಿ ಮುಸ್ಕಾನ್ (27) ಹಾಗೂ ಆಕೆಯ ಪ್ರಿಯಕರ ಸಾಹಿಲ್ (25) ಅವರ ಮೇಲೆ ಅನುಮಾನ ಹೋಗಿತ್ತು. ಪತ್ನಿ ಮುಸ್ಕಾನ್ ಪೊಲೀಸರ ವಿಚಾರಣೆಯಲ್ಲಿ ಪತಿಯನ್ನು ಕೊಂದು ದೇಹವನ್ನು ನಾಶಮಾಡಿದ ಘಟನೆಯನ್ನು ಒಪ್ಪಿಕೊಂಡಿದ್ದಾಳೆ.
ಮುಸ್ಕಾನ್ ಮತ್ತು ಸಾಹಿಲ್ ಸೇರಿ ಸೌರಭ್ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಬಳಿಕ ಆತನ ದೇಹವನ್ನು ತುಂಡರಿಸಿ, ಡ್ರಮ್‌ನೊಳಗೆ ಹಾಕಿ, ಮೇಲ್ನೋಟಕ್ಕೆ ಏನೂ ತಿಳಿಯದಂತೆ ಅದನ್ನು ಸಿಮೆಂಟ್‌ನಿಂದ ಮುಚ್ಚಿದ್ದಾರೆ.
ಸೌರಭ್ ನಾಪತ್ತೆಯಾಗಿರುವಂತೆ ತೋರಿಸಲು, ಪತ್ನಿ ಮುಸ್ಕಾನ್ ಆತನ ಮೊಬೈಲ್ ನಿಂದ ಕುಟುಂಬ ಸದಸ್ಯರಿಗೆ ಮೆಸೇಜ್ ಕಳುಹಿಸಿ, ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನಿಸಿದ್ದಳು. ಆದರೆ ಪೊಲೀಸರ ಸೂಕ್ಷ್ಮ ತನಿಖೆಯಿಂದ ಕೊಲೆ ಬಯಲಿಗೆ ಬಿದ್ದಿದೆ.
ಕೊಲೆ ಮಾಡಿದ ಬಳಿಕ ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಜೊತೆ ಸುತ್ತಾಡಲು ತೆರಳಿದ್ದಳು. ಸದ್ಯ ಆರೋಪಿಗಳಾದ ಮುಸ್ಕಾನ್ ಹಾಗೂ ಸಾಹಿಲ್‌ನನ್ನು ಬಂಧಿಸಲಾಗಿದೆ.




