ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನಿಂದ ಅತ್ಯಾಚಾರ

ಶೇರ್ ಮಾಡಿ
Kalaburagi

ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕ ಅತ್ಯಾಚಾರ ಎಸಗಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾದನಹಿಪ್ಪರಗಾ ಗ್ರಾಮದ 14 ವರ್ಷದ ವಿದ್ಯಾರ್ಥಿನಿಯ ಮೇಲೆ, ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಿವರಾಜ್ ಎಂಬಾತನು ಅತ್ಯಾಚಾರ ಎಸಗಿದ್ದಾನೆ. ಮನೆಯವರು ಇಲ್ಲದ ಸಂದರ್ಭವನ್ನು ಗಮನಿಸಿದ ಆರೋಪಿಯು ವಿದ್ಯಾರ್ಥಿನಿ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ.

ಘಟನೆ ಸಂಬಂಧ ಮಾದನಹಿಪ್ಪರಗಾ ಪೊಲೀಸರು ಶಿವರಾಜ್‌ನನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

cricket
  •  

Leave a Reply

error: Content is protected !!