

ಶಿಶಿಲ: ಶಿಶಿಲ ಶಿವಶಕ್ತಿ ಆಟೋ ಚಾಲಕ ಮಾಲಕ ಸಂಘದ ಆಶ್ರಯದಲ್ಲಿ ಶಿವಶಕ್ತಿ ಟ್ರೋಫಿ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಶಿಶಿಲದ ವೈಕುಂಠಪುರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಬಂಗೇರ ಬ್ರಿಗೇಡ್ ಅಧ್ಯಕ್ಷೆ ವಿನುತಾ ಬಂಗೇರ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. “ಸಮಾಜದ ಸೌಹಾರ್ದತೆ ಹಾಗೂ ಒಗ್ಗಟ್ಟಿಗೆ ಇಂತಹ ಸ್ಪರ್ಧಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾದರಿಯಾಗುತ್ತವೆ. ಆಟೋ ಚಾಲಕ ಮಾಲಕರು ಕಠಿಣ ಪರಿಶ್ರಮದ ನಡುವೆಯೂ ತಮ್ಮ ದುಡಿಮೆಯೊಂದಂಶವನ್ನು ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿಟ್ಟು, ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವುದು ಪ್ರಶಂಸನೀಯ,” ಎಂದು ಅವರು ಹೇಳಿದರು.

ಸಭಾ ವೇದಿಕೆಯಲ್ಲಿ ಶಿಶಿಲ ಗ್ರಾ.ಪಂ.ಅಧ್ಯಕ್ಷ ಸುಧೀನ್.ಡಿ, ಉಪಾಧ್ಯಕ್ಷ ಯಶೋಧರ ಕೆ.ವಿ, ಶಿಶಿಲ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಧ್ಯಕ್ಷ ಹರೀಶ್ ಕೆ, ಅರಸಿನಮಕ್ಕಿ ಚಾಮುಂಡೇಶ್ವರಿ ಸೌಂಡ್ಸ್ ಅಂಡ್ ಲೈಟಿಂಗ್ಸ್ ಮಾಲಕ ದಯಾನಂದ ಶೆಟ್ಟಿ, ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥ ಪೂಜಾರಿ, ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ರಾಮಚಂದ್ರ, ಶಿಶಿಲ ಶಿವಶಕ್ತಿ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಜಯರಾಮ.ಡಿ ಉಪಸ್ಥಿತರಿದ್ದರು.
ರಮೇಶ್ ಬೈಲಕಟ್ಟ ಸ್ವಾಗತಿಸಿದರು. ಸೂರಜ್ ನಲ್ಲಿತ್ತಾಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಿವಶಕ್ತಿ ಟ್ರೋಫಿ ಕ್ರಿಕೆಟ್ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಡ್ಲ ಕುಸಾಲ್ ತಂಡದವರಿಂದ ತೆಲಿಕೆದ ಕಮ್ಮೆನ ಪ್ರದರ್ಶನ ವಿಶೇಷ ಆಕರ್ಷಣೆಯಾಯಿತು. ಹೇವಾಜೆ, ಶಿಶಿಲ ಕೊಳಕ್ಕೆಬೈಲು ಹಾಗೂ ಆಶ್ರಮ ಶಾಲೆ ವೈಕುಂಠಪುರದ ಮಕ್ಕಳಿಂದ ನೃತ್ಯ ವೈಭವ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಅರಸಿನಮಕ್ಕಿ ಹತ್ಯಡ್ಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ನಿರ್ದೇಶಕರಾದ ಧರ್ಮರಾಜ್ ಅಡ್ಕಾಡಿ, ಬೆಂಗಳೂರಿನ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಅರಸಿನಮಕ್ಕಿ ಸಾಗರ್ ಸುಫಾರಿ ಮಾಲಕ ಹರ್ಷದ್ ಹಾಗೂ ಅರಸಿನಮಕ್ಕಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧೀರ್ ಕುಮಾರ್ ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಸಂಘದ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಶಿಶಿಲ ಶಿವಶಕ್ತಿ ಆಟೋ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು ಸಹಕರಿಸಿದರು.







