1ನೇ ತರಗತಿಗೆ ವಯೋಮಿತಿ ಸಡಿಲಿಕೆ: 5 ವರ್ಷ 5 ತಿಂಗಳು ಮಕ್ಕಳಿಗೆ ಅವಕಾಶ – ಸಚಿವ ಮಧು ಬಂಗಾರಪ್ಪ

ಶೇರ್ ಮಾಡಿ

ಬೆಂಗಳೂರು: ರಾಜ್ಯದ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 1ನೇ ತರಗತಿಗೆ ಸೇರ್ಪಡೆಯ ವಯೋಮಿತಿಯನ್ನು ಈ ವರ್ಷದ ಮಟ್ಟಿಗೆ ಸಡಿಲಿಸಲಾಗಿದೆ. 5 ವರ್ಷ 5 ತಿಂಗಳು ವಯಸ್ಸು ತುಂಬಿರುವ ಮಕ್ಕಳಿಗೆ 1ನೇ ತರಗತಿಗೆ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪೋಷಕರು ವಯೋಮಿತಿಯ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ಇದೇ ಕಾರಣದಿಂದ ಈ ವರ್ಷದ ಮಟ್ಟಿಗೆ ರಿಯಾಯಿತಿ ನೀಡಿ, 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ 1ನೇ ತರಗತಿಯ ಪ್ರವೇಶ ನೀಡಲು ಅವಕಾಶ ಮಾಡಲಾಗಿದೆ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ 6 ವರ್ಷ ವಯಸ್ಸು ಕಡ್ಡಾಯವಾಗಲಿದೆ,” ಎಂದರು.

ಎಸ್‌ಇಪಿ ಸಂಸ್ಥೆಯ ವರದಿಯ ಆಧಾರದ ಮೇಲೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. “ತಂತ್ರಜ್ಞಾನ ಬಳಸಿ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದೇವೆ” ಎಂದೂ ಹೇಳಿದರು.

ಈ ಸಡಿಲಿಕೆ ಕೇವಲ ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಅನ್ವಯವಾಗುತ್ತದೆ. ಸಿಬಿಎಸ್‌ಇ ಮತ್ತು ಐಸಿಎಸ್‌ಸಿ ಬೋರ್ಡ್ ಶಾಲೆಗಳ ವಿಷಯದಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಕ್ಕಳ ಮೇಲೆ ಓದುತ್ತಾರೆಯೆಂದು ಒತ್ತಡ ಹಾಕಬಾರದು. ಪೋಷಕರು ಮಿಷನ್ ಓದಿನತ್ತ ಮಕ್ಕಳನ್ನು ದೂಡಬಾರದು. ಒತ್ತಡವಿಲ್ಲದೆ ಶಿಕ್ಷಣ ದೊರಕುವಂತಿರಲಿ ಎಂಬುದು ನಮ್ಮ ಧೋರಣೆ ಎಂದು ಸಚಿವರು ಸಲಹೆ ನೀಡಿದರು.

  •  

Leave a Reply

error: Content is protected !!