ಜೇಸಿಐ ಕೊಕ್ಕಡ ಕಪಿಲ,ಜೂನಿಯರ್ ಜೇಸಿ ವಿಭಾಗದ ವತಿಯಿಂದ ಸೂಪರ್ ಸಿಕ್ಸ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಶೇರ್ ಮಾಡಿ

ನೇಸರ ಮಾ.6: ಜೇಸಿಐ ಕೊಕ್ಕಡ ಕಪಿಲ ಮತ್ತು ಜೂನಿಯರ್ ಜೇಸಿ ವಿಭಾಗದ ವತಿಯಿಂದ ಮಾ.6ನೇ ಆದಿತ್ಯವಾರ ಬಿ ಜಿ ಎಸ್ ರಚನಾ ಸ್ಥಳ ಹಳ್ಳಿಂಗೇರಿ ಇದರ ವಠಾರದಲ್ಲಿ 8 ಜನರ ಸೂಪರ್ ಸಿಕ್ಸ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಉದ್ಘಾಟನಾ ಸಮಾರಂಭ:
ಉದ್ಘಾಟಕರಾದ JFD.ರವಿಚಂದ್ರ ಪಾಟಾಳಿ, ವಲಯ ಉಪಾಧ್ಯಕ್ಷರು ಅತಿಥಿ ಗಣ್ಯರೊಂದಿಗೆ ಕ್ರಿಕೆಟ್ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜೇಸಿಐ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ, ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದರೊಂದಿಗೆ, ಸಮಾಜಮುಖಿ ಕೆಲಸಗಳನ್ನು ಮಾಡುವಂತಹ ಸಂಸ್ಥೆ ಇದಾಗಿದೆ. ಯುವಕರು ಈ ಸಂಸ್ಥೆಯಲ್ಲಿ ಸದಸ್ಯರಾಲು ಅವಕಾಶವಿದೆ ಎಂದರು ಹಾಗೂ ಕಾರ್ಯಕ್ರಮ ಯಶಸ್ವಿಗೆ ಶುಭವನ್ನು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಮೋಹನ್ ದಾಸ್ ಗೌಡ, ಹಿರಿಯ ವೈದ್ಯರು ಕೊಕ್ಕಡ ಹಾಗೂ ಶಿವಾನಂದ, ಅಧ್ಯಾಪಕರು ಬೆಥನಿ ಐಟಿಐ ನೆಲ್ಯಾಡಿ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಕೊಕ್ಕಡ ಕಪಿಲದ ಅಧ್ಯಕ್ಷರಾದ ಜೇಸಿ.ಶ್ರೀಧರ್ ರಾವ್ ವಹಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಜೇಸಿ.ಗಣೇಶ್.ಕೆ, ಯೋಜನಾ ನಿರ್ದೇಶಕ ಜೇಸಿ.ಜೀವನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಕ್ರಿಕೆಟ್ ಪಂದ್ಯಾಟವು ನಡೆಯಿತು.

ಸಮಾರೋಪ ಸಮಾರಂಭ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ.ಶ್ರೀಧರ ರಾವ್ ಅಧ್ಯಕ್ಷರು ಜೇಸಿಐ ಕೊಕ್ಕಡ ಕಪಿಲ, ವಹಿಸಿದರು. ಅತಿಥಿಗಳಾಗಿ ಜೇಸಿ.ಪ್ರಶಾಂತ್ ಸಿ.ಎಚ್, ವಲಯಾಧಿಕಾರಿ ವಲಯ 15, ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷರು ವರ್ತಕ ಸಂಘ ಕೊಕ್ಕಡ, ಬಾಲಕೃಷ್ಣ, ಉದ್ಯಮಿಗಳು ನೈಮಿಷ ಸ್ಪೈಸಸ್ ಸೌತಡ್ಕ, ಸುರೇಶ್ ಪಡಿಪಂಡ,ಕ್ರೀಡಾ ನಿರೂಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ವೇದಿಕೆಗೆ HGF.ಜೋಸೆಫ್ ಪಿರೇರಾ ಆಹ್ವಾನಿಸಿದರು, ಜೇಸಿ ವಾಣಿ ಜೇಸಿ.ಜಸ್ವಂತ್ ಪಿರೇರಾ ವಾಚಿಸಿದರು. ಧನ್ಯವಾದ ಸಮರ್ಪಣೆಯನ್ನು ಕಾರ್ಯದರ್ಶಿ ಜೇಸಿ.ನರಸಿಂಹ ನಾಯಕ್ ನೀಡಿದರು. ತೀರ್ಪುಗಾರರಾಗಿ ರವೀಶ್ ಹಳ್ಳಿಂಗೇರಿ ಹಾಗೂ ರಂಜು ಕೊಕ್ಕಡ ಸಹಕರಿಸಿದರು.

ಬಹುಮಾನ ವಿಜೇತರು:
ಪ್ರಥಮ: RT ಬ್ರದರ್ಸ್ ಹೊಸಮಜಲು, ದ್ವಿತೀಯ: ಶ್ರೀ ಲಕ್ಷ್ಮಿ ಕೊಕ್ಕಡ, ತೃತೀಯ: ಶ್ರದ್ಧಾ ಉಪ್ಪಾರ ಪಳಿಕೆ, ಚತುರ್ಥ: ವೈದ್ಯನಾಥೇಶ್ವರ ಕೊಕ್ಕಡ.
ಉತ್ತಮ ಬೌಲರ್ ಸಿದ್ದಿಕ್, ಉತ್ತಮ ದಾಂಡಿಗನಾಗಿ ಶರೀಫ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಫಯಾಜ್ ಪಡೆದುಕೊಂಡರು.

 

—ಜಾಹೀರಾತು—

Leave a Reply

error: Content is protected !!