ನೇಸರ ಮಾ.6: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಂಶೋಧನಾ ಸಮಿತಿಯು(ರಿಸರ್ಚ್ ಕಮಿಟಿ)ಫೆ.26ರಂದು ಕಾಲೇಜಿನ ಎಲ್ಲಾ ಉಪನ್ಯಾಸಕರಿಗಾಗಿ “ರೈಟಿಂಗ್ ರಿಸರ್ಚ್ ಆರ್ಟಿಕಲ್ ” ಎಂಬ ವಿಚಾರದ ಕುರಿತು ಕಾರ್ಯಾಗಾರವನ್ನು ಆಯೋಜಿಸಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಡಾ.ಕಾವ್ಯಶ್ರೀ.ಕೆ.ಬಿ. ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಲಾಜಿ ವಿಭಾಗ, ಎಂ.ಸಿ.ಎಚ್.ಪಿ, ಎಂ.ಎ.ಎಚ್.ಇ, ಮಣಿಪಾಲ್ ಇವರು ಭಾಗವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಗೋವಿಂದ.ಎನ್.ಎಸ್, ಸಂಶೋಧನಾ ಸಮಿತಿಯ ಸಂಯೋಜಕರಾದ ಡಾ.ದಿನೇಶ್ ಪಿ.ಟಿ, ಸದಸ್ಯರಾದ ಡಾ.ಪ್ರಸಾದ್.ಎನ್, ಡಾ.ಕೃಷ್ಣ ಡಿ ಲಮಣಿ, ಡಾ.ನೀತು ಸೂರಜ್, ಶ್ರೀ ವಿನ್ಯಾಸ್. ಎಚ್ ಉಪಸ್ಥಿತರಿದ್ದರು. ಕು.ಸೌಜನ್ಯ ಹಾಗೂ ಕು.ಸಿಂಧು ಭೈರವಿ ಪ್ರಾರ್ಥಿಸಿದರು, ಘಟಕದ ಕಾರ್ಯದರ್ಶಿ ಕು.ಶ್ರೇಯಾ ಸ್ವಾಗತಿಸಿದರು, ಕು.ಸಂಧ್ಯಾ ಧನ್ಯವಾದವನ್ನು ನೀಡಿದರು. ಕಾರ್ಯಗಾರ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು.
—ಜಾಹೀರಾತು—