ಅರಸಿನಮಕ್ಕಿ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಸರ್ವೀಸ್ ಜೀಪ್

ಶೇರ್ ಮಾಡಿ

ನೇಸರ ಮಾ.5: ಕೊಕ್ಕಡದಿಂದ ಶಿಶಿಲ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಸರ್ವಿಸ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಚರಂಡಿಗೆ ಉರುಳಿ ಬಿದ್ದ ಘಟನೆ ಅರಸಿನಮಕ್ಕಿ ಮಸೀದಿ ತಿರುವು ಬಳಿ ಇಂದು (ಮಾ.5) ಸಂಜೆ ನಡೆದಿದೆ.
ಜೀಪು ಉರುಳಿ ಬಿದ್ದ ರಭಸಕ್ಕೆ ಜೀಪಿನಲ್ಲಿದ್ದ 5 ಪ್ರಯಾಣಿಕರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ರಕ್ಷಿತಾ, ಕಮಲ, ಗೌರೀಶ, ಹೊನ್ನಪ್ಪ ಪೂಜಾರಿ, ಉಮೇಶ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಕ್ಕಡದ ಆಂಬುಲೆನ್ಸ್ ನಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

error: Content is protected !!