ಕೊಕ್ಕಡ ಗ್ರಾಮ ಪಂಚಾಯತಿ ನಿಂದ 15ನೇ ಹಣಕಾಸು ಯೋಜನೆಯಡಿ ನಿರ್ಮಿಸಲಾದ ಬೀದಿ ದೀಪಗಳ ಉದ್ಘಾಟನೆ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಹಾವೀರ ಕಾಲೋನಿ ಸಂಪರ್ಕ ರಸ್ತೆಯಲ್ಲಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಅಳವಡಿಸಲಾದ ಬೀದಿ ದೀಪವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಸತ್ಯ ಸಾರಾಮಣಿ ದೈವಸ್ಥಾನದ ಅಧ್ಯಕ್ಷ ಗಿರೀಶ್ ಮಹಾವೀರ ಕಾಲೋನಿಯವರು ಬೀದಿದೀಪದ ಗುಂಡಿ ಒತ್ತುವ ಮೂಲಕ ಉದ್ಘಾಟನೆ ಮಾಡಿದರು.

ಉಪ್ಪಾರಪಳಿಕೆಯಿಂದ ಗೊಳಿತೊಟ್ಟು ಮಾರ್ಗದಲ್ಲಿ ಅಳವಡಿಸಲಾದ ಬೀದಿದೀಪವನ್ನು ಕೊಕ್ಕಡ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಭಾಕರ್ ಗೌಡ ರವರು ಉದ್ಘಾಟಿಸಿದರು.

ಗ್ರಾಮ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಅಲಂಬಿಲ, ಸದಸ್ಯರಾದ ಜಗದೀಶ್ ಕೆಂಪಕೋಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಶ್ರೀಮತಿ ಭಾರತೀ, ಫ್ಯಾಕ್ಸ್ ಬ್ಯಾಂಕ್ ನಿರ್ದೇಶಕರಾದ ಶ್ರೀನಾಥ್ ಬಡೆಕಾಯಿಲ್, ಕಾಮಗಾರಿ ನಡೆಸಿದ ಪುರುಷೋತ್ತಮ್ ಕೊಕ್ಕಡ ಹಾಗೂ ಮೆಸ್ಕಾಂ ಇಲಾಖೆಯ ಹಿರಿಯ ಪವರ್ ಮ್ಯಾನ್‌ ಗಳಾದ ರವಿ ಮತ್ತು ಕುಮಾರ್, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಶಶಿ ತಿಪ್ಪೆಮೆಜಲು ಹಾಗೂ ಕಾರ್ಯದರ್ಶಿ ಶ್ರೀಧರ್ ಬಳಕ್ಕ ಉಪಸ್ಥಿತರಿದ್ದರು.

  •  

Leave a Reply

error: Content is protected !!