


ನೆಲ್ಯಾಡಿ: ಕಡಬ ತಾಲೂಕಿನ ಹೊಸಮಜಲು ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಆನಂದ ಗೌಡ(59) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ನೆಲ್ಯಾಡಿ ಸಮೀಪದ ಬಾಕಿಜಾಲು ನಿವಾಸಿಯಾಗಿದ್ದ ಆನಂದ ಗೌಡ ಅವರು ರಾಜ್ಯಮಟ್ಟದ ಸೇವಾದಳದ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೇ 31ರಂದು ನಿವೃತ್ತಿಗೆ ಸಿದ್ಧರಾಗಿದ್ದ ಅವರು ಇದಕ್ಕೂ ಮುನ್ನವೇ ವಿಧಿಯಾಟಕ್ಕೆ ಬಲಿಯಾದರು. ಮೃತರು ಪತ್ನಿ ವೀಣಾ ಬಜತ್ತೂರು ಶಾಲಾ ಶಿಕ್ಷಕಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯವಾಗಿದ್ದು, ಅಗಲಿಕೆಯಿಂದ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿ ಸಮುದಾಯ ದುಃಖ ವ್ಯಕ್ತಪಡಿಸಿದ್ದಾರೆ.













