ಅಪರೇಷನ್ ಸಿಂಧೂರ ಯಶಸ್ಸಿಗೆ ಧನ್ಯವಾದವಾಗಿ ಶಿಬಾಜೆ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ವಿಶೇಷ ಪೂಜೆ

ಶೇರ್ ಮಾಡಿ

ಕೊಕ್ಕಡ: ಭಾರತೀಯ ಸೇನೆಯು ಅಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿರುವ ಹಿನ್ನೆಲೆಯಲ್ಲಿ, ಶಿಬಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇಶದ ಸೈನಿಕರಿಗೆ ದೇವರು ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡಲೆಂದು ಹಾಗೂ ಅವರ ಕುಟುಂಬಗಳಿಗೆ ಕ್ಷೇಮ, ಸುಖ-ಸಂತೋಷ, ಸಮೃದ್ಧಿಯಲ್ಲಿ ಇರಲೆಂಬ ಉದ್ದೇಶದಿಂದ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ವಿಶೇಷ ಪೂಜೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ.ಶ್ರೀಧರ್ ರಾವ್, ಸಮಸ್ತ ಸದಸ್ಯರು, ಅರ್ಚಕ ವೃಂದ ಮತ್ತು ಗ್ರಾಮದ ಭಕ್ತ ಸಮುದಾಯ ಉತ್ಸಾಹದಿಂದ ಭಾಗವಹಿಸಿದ್ದರು.

  •  

Leave a Reply

error: Content is protected !!