

ಶಿಶಿಲ: ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ ಶಿಶಿಲದ ನಾಗನಡ್ಕ ಗಣೇಶ ಸಮುದಾಯ ಭವನದಲ್ಲಿ ನಡೆಯಿತು.

ತಾಲೂಕು ಯೋಜನಾಧಿಕಾರಿ ಯಶೋಧರ್ ಅವರು ಭಾಗವಹಿಸಿ ಘಟಕದ ಶ್ಲಾಘನೀಯ ಸೇವೆಯನ್ನು ಮೆಚ್ಚಿದರು. ಅವರು, ಘಟಕ ಮುಂದಿನ ದಿನಗಳಲ್ಲಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಯೋಜನಾಧಿಕಾರಿಗಳಾದ ಜಯವಂತ ಪಟಗಾರ್ ಅವರು ಘಟಕದ ಸೇವಾ ಚಟುವಟಿಕೆಗಳ ವರದಿಯನ್ನು ಧಾಖಲಾತಿಗಳ ಸಹಿತವಾಗಿ ಮಂಡಿಸಿದರು. ಜೊತೆಗೆ ಪಡೆದುಕೊಂಡ ಭತ್ಯೆಗಳು, ಸದಸ್ಯರ ಹಾಜರಾತಿ ಇತ್ಯಾದಿ ಮಾಹಿತಿಯನ್ನು ವಿವರವಾಗಿ ವಿವರಿಸಿ, ಘಟಕ ಮುಂದಿನ ದಿನಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಮಾರ್ಗದರ್ಶನ ನೀಡಿದರು.
ಇನ್ನೊಬ್ಬ ಯೋಜನಾಧಿಕಾರಿಯಾದ ಕಿಶೋರ್ ಅವರು ಮಾದರಿ ತಂಡವಾಗಿ ಕಾರ್ಯನಿರ್ವಹಿಸಲು ಅನೇಕ ಉಪಯುಕ್ತ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾರವರು ಉಪಸ್ಥಿತರಿದ್ದು ಘಟಕದ ಕಾರ್ಯಪದ್ಧತಿಗೆ ಬೆಂಬಲ ನೀಡಿದರು.
ಕಾರ್ಯಕ್ರಮದಲ್ಲಿ ರಮೇಶ ಬೈರಕಟ್ಟ ಸ್ವಾಗತಿಸಿ, ಕುಶಾಲಪ್ಪ ಗೌಡ ವಂದಿಸಿದರು. ಘಟಕದ ಸಂಯೋಜಕರಾದ ರಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.












