

ಕೊಕ್ಕಡ: ಪಟ್ಟೂರು ಬಳಿಯ ಪುಂಡಿಕಾಯಿ ತಿರುವಿನಲ್ಲಿ ಗುರುವಾರದಂದು ಜೀಪು ಮತ್ತು ಗೂಡ್ಸ್ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಉಂಟಾಗಿದೆ. ಅಪಘಾತದ ರಭಸಕ್ಕೆ ರಿಕ್ಷಾ ಮತ್ತು ಜೀಪು ಎರಡೂ ಭಾಗಶಃ ಹಾನಿಗೊಳಗಾಗಿವೆ.
ಘಟನೆಯಲ್ಲಿ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸುಂದರಿ, ಗಿರಿಜಾ ಮತ್ತು ಲಲಿತ ಎಂಬ ಮಹಿಳೆಯರು ಹಾಗೂ ರಿಕ್ಷಾ ಚಾಲಕ ಸಿದ್ದಿಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಕೊಕ್ಕಡ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಲಾಯಿತು. ರಿಕ್ಷಾ ಮಲ್ಲಿಗೆಮಜಲು ನಿವಾಸಿ ಸಿದ್ದಿಕ್ ಅವರಿಗೆ ಸೇರಿದ್ದು, ಜೀಪ್ ದಿಡುಪೆಯಿಂದ ಮಾಡವು ಕಡೆಗೆ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದು.
ಅಪಘಾತ ಸಂಭವಿಸಿದ ಪುಂಡಿಕಾಯಿ ತಿರುವು ಜಿಲ್ಲಾ ಪಂಚಾಯಿತಿ ರಸ್ತೆಗೆ ಸೇರಿದ ಸ್ಥಳವಾಗಿದ್ದು, ಇದು ಅತಂತ್ರ ಹಾಗೂ ಅಪಾಯಕಾರಿ ಬಿಂದು ಎಂದೇ ಪರಿಚಿತವಾಗಿದೆ. ಇದೇ ರೀತಿ ಅಪಘಾತಗಳು ಆಗಾಗ ಆಗುತ್ತಲೇ ಇವೆ. ಸ್ಥಳೀಯರು ಈ ಬಗ್ಗೆ ಹಲವು ಬಾರಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.













