

ಕೊಕ್ಕಡ: ಕೌಕ್ರಾಡಿ-ಕೊಕ್ಕಡ ಸಂತ ಜೋನರ ದೇವಾಲಯದಲ್ಲಿ ಭಾನುವಾರ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ.ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾರವರ ಸೂಚನೆಯಂತೆ, ಹೊಸ ಪೋಪ್ ಲಿಯೋ XIV ರವರ ಆಯ್ಕೆಗಾಗಿ ಕೃತಜ್ಞತೆ ಹಾಗೂ ಜಗತ್ತಿನ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನವಗುರು ಫಾ. ಮರ್ವಿನ್ ಪ್ರವೀಣ್ ಲೋಬೊ, ಫಾ.ಅನಿಲ್ ಪ್ರಕಾಶ್ ಡಿಸಿಲ್ವಾ ಮತ್ತು ಫಾ.ಅಶೋಕ್ ಡಿಸೋಜರವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು.
ಬಲಿಪೂಜೆಯ ನಂತರ, ಕಳೆದ ಆರು ತಿಂಗಳು ದೇವಾಲಯದಲ್ಲಿ ಸೇವೆ ಸಲ್ಲಿಸಿ, ಎಪ್ರಿಲ್ 30ರಂದು ಮಂಗಳೂರು ಬಿಷಪರಿಂದ ಗುರುದೀಕ್ಷೆ ಪಡೆದ ಫಾ.ಮರ್ವಿನ್ ಪ್ರವೀಣ್ ಲೋಬೊರವರಿಗೆ ಶುಭಹಾರೈಸುವ ವಿಶೇಷ ಕಾರ್ಯಕ್ರಮ ಜರುಗಿತು. ಚರ್ಚ್ ಪರಿವಾರದ ನೇತೃತ್ವದಲ್ಲಿ ನವಗುರುರನ್ನು ಸನ್ಮಾನಿಸಿ, ಅವರ ಮುಂದಿನ ಪೌರೋಹಿತ್ಯ ಸೇವೆಗೆ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಚರ್ಚ್ನ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ, ಅವರನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಧರ್ಮಗುರುಗಳಾದ ಫಾ.ಅನಿಲ್ ಪ್ರಕಾಶ್ ಡಿಸಿಲ್ವಾ, ಫಾ. ಅಶೋಕ್ ಡಿಸೋಜ, ಚರ್ಚ್ ಉಪಾಧ್ಯಕ್ಷ ನೋಯೆಲ್ ಪ್ರವೀಣ್ ಮೊಂತೇರೊ, ಕಾರ್ಯದರ್ಶಿ ಶ್ರೀಮತಿ ವೀಣಾ ಮಸ್ಕರೇನ್ಹಸ್, ಆಯೋಗಗಳ ಸಂಯೋಜಕಿ ಶ್ರೀಮತಿ ವಿನ್ನಿಪ್ರೆಡ್ ಡಿಸೋಜ ಹಾಗೂ ಧರ್ಮಪ್ರಾಂತ್ಯದ ಸಮಿತಿ ಸದಸ್ಯ ವಿನ್ಸೆಂಟ್ ಮಿನೇಜಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚರ್ಚ್ನ ಎಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ, ಅವರನ್ನು ಪ್ರೋತ್ಸಾಹಿಸಲಾಯಿತು.













