

ಮೈಸೂರು: ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ತಲೆ ಎತ್ತುವ ಆತಂಕದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯ ಸೂಚನೆ ನೀಡುವಂತೆ ಇಂದು ಮಾಸ್ಕ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಮೈಸೂರಿನ ಹಿನಕಲ್‌ನಲ್ಲಿ ಇಂದು ಮುಂಜಾನೆ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿದ್ದ ಸಿಎಂ, ಸಾರ್ವಜನಿಕರಿಂದ ಮಾಸ್ಕ್ ಧರಿಸಿಯೇ ಅಹವಾಲು ಸ್ವೀಕರಿಸಿದರು.
ರಾಜ್ಯದಲ್ಲಿ ಕೆಲವೆಡೆ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗುತ್ತಿರುವ ಹಿನ್ನೆಲೆ, ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ಸೂಚನೆ ದೊರೆತಿದ್ದು, ಸಿಎಂ ಈ ವೇಳೆ ತಮ್ಮ ನಡೆ ಮೂಲಕ ಜನರಿಗೆ ಮಾಸ್ಕ್ ಬಳಕೆ ಬಗ್ಗೆ ಸಂದೇಶವನ್ನೇ ನೀಡಿದಂತಾಗಿದೆ.
ಮೈಸೂರು ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ, ಇಂದು ಎರಡು ಕಾರ್ಯಕ್ರಮಗಳಲ್ಲಿ ಮಾತ್ರ ಪಾಲ್ಗೊಂಡು, ನಿಗದಿಯಾಗಿದ್ದ ಮಧ್ಯಾಹ್ನದ ಇನ್ನಿತರೆ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು.
ಹಿನಕಲ್‌ನ ಇಂದಿರಾ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ, “ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ನೀಡಿದ ಸ್ಥಳ. ಹಂತ ಹಂತವಾಗಿ ಹಿನಕಲ್‌ನ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ,” ಎಂದು ಭರವಸೆ ನೀಡಿದರು.













