ನೆಲ್ಯಾಡಿ ರಾಮನಗರದಲ್ಲಿ ಉಚಿತ ಪುಸ್ತಕ ವಿತರಣೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ರಾಮನಗರದ ಅಮೆತ್ತಿಮಾರು ಗುತ್ತು ಮನೆಯಲ್ಲಿ, ಶೈಕ್ಷಣಿಕ ಜಾಗೃತಿ ಮೂಡಿಸುವ ಉದ್ದೇಶದಿಂದ, ವಿವಿಧ ದಾನಿಗಳ ಸಹಕಾರದೊಂದಿಗೆ 1ನೇ ತರಗತಿಯಿಂದ ಪದವಿವರೆಗೆ ಅಧ್ಯಯನ ಮಾಡುತ್ತಿರುವ ನೂರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಪುಸ್ತಕ ವಿತರಣಾ ಕಾರ್ಯಕ್ರಮ ನೆರವೇರಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಕಡಬದ ಸಮಾಜಸೇವಕ ಶ್ರೀಕರ ರೈ ಅಗರಿ ಮಾತನಾಡುತ್ತಾ, “ಶಿಕ್ಷಣವೇ ಬೆಳಕಿನ ದಾರಿ. ಸರ್ಕಾರ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಈ ರೀತಿಯ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮಗಳು ಹೊಸ ಶಕ್ತಿ ನೀಡುತ್ತವೆ. ಜಾತಿ-ಧರ್ಮ ಮೀರಿದ ಈ ಒಗ್ಗಟ್ಟಿನ ಸೇವಾಭಾವ ನಮಗೆಲ್ಲಾ ಮಾದರಿಯಾಗಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಹಾಗೂ ದಾನಿಯಾದ ರಮೇಶ ಗೌಡ ನಾಲ್ಗೊತ್ತು ಶುಭಹಾರೈಸಿ, ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಇಂತಹ ಕಾರ್ಯಕ್ರಮಗಳ ಅಗತ್ಯತೆಯನ್ನು ಒತ್ತಿಹೇಳಿದರು.

ಈ ಸಂದರ್ಭದಲ್ಲಿ, ಕಳೆದ ಐದು ವರ್ಷಗಳಿಂದ ಈ ಕಾರ್ಯಕ್ರಮದ ಸಂಯೋಜನೆಯ ಹೊಣೆಯನ್ನು ನಿರ್ವಹಿಸುತ್ತಿರುವ ನಿಕಟಪೂರ್ವ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ ಅಮೆತ್ತಿಮಾರು ಗುತ್ತು ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, “ಅಧಿಕಾರ, ಸ್ಥಾನ, ಹಣವಿಲ್ಲದೆ ಸಹ ಸಮಾಜದ ಒಳಿತಿಗಾಗಿ ನಾವು ಏನು ಮಾಡಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಉದಾಹರಣೆ. ಮಕ್ಕಳ ಮುಖದಲ್ಲಿ ಕಂಡ ನಗು ನಮಗೆ ತೃಪ್ತಿ ಸಂತೋಷ ವಾಗಿದೆ” ಎಂದು ಭಾವನಾತ್ಮಕವಾಗಿ ಹೇಳಿದರು.

ಈ ಬಾರಿ ಉಚಿತ ಪುಸ್ತಕ ವಿತರಣೆಯಲ್ಲಿ ನೆರವಾದ ಪ್ರಮುಖ ದಾನಿಗಳಲ್ಲಿ ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್ ನ ಮಾಲಿಕ ಉದಯ್ ಕುಮಾರ್ ಭಟ್, ನೆಲ್ಯಾಡಿ ಸಿಎ ಬ್ಯಾಂಕ್ ನ ಉದ್ಯೋಗಿ ಮಹೇಶ್ ಗೌಡ ಮುದಲೆಗುತ್ತು, ರಮೇಶ ಗೌಡ ನಾಲ್ಗೊತ್ತು, ಶ್ರೀಕರ ರೈ ಅಗರಿ ಹಾಗೂ ಗಂಗಾಧರ ಶೆಟ್ಟಿ ಪ್ರಮುಖರಾಗಿದ್ದರು.

  •  

Leave a Reply

error: Content is protected !!