ನೇಸರ ಮಾ.09: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಸಬಲೀಕರಣ ಮತ್ತು ಆರೋಗ್ಯ ಕುರಿತು ವಲಯ ತರಬೇತುದಾರ ಚೇತನ್ ಮೊಗ್ರಾಲ್ ಉಪನ್ಯಾಸ ನೀಡಿ ಮಹಿಳೆಯರು ಸ್ವಸ್ಥ ಸಮಾಜದ ನಿರ್ಮಾತೃಗಳು. ಅವರ ಸಬಲೀಕರಣ ಮತ್ತು ಆರೋಗ್ಯದ ಕಡೆಗೆ ವಿಶೇಷ ಗಮನವನ್ನು ಸಮಾಜ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜೇಸಿ ಸಂಸ್ಥೆ ಮಹಿಳೆಯರ ಶ್ರೇಯೋಭಿವೃದ್ಧಿಗೆ, ವ್ಯಕ್ತಿತ್ವ ವಿಕಸನಕ್ಕೆ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇದರಲ್ಲಿ ಮಹಿಳೆಯರು ಸಕ್ರಿಯರಾಗಿ ಪಾಲ್ಗೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಆರೋಗ್ಯ ಕ್ಷೇತ್ರದಲ್ಲಿ ಕೊರೋನ ವಾರಿಯರ್ಸ್ ಯಾಗಿ ಸೇವೆ ನೀಡಿದವರಿಗೆ ಜೇಸಿಯ “ಸಂಜೀವಿನಿ” ಗೌರವಾರ್ಪಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಆರೋಗ್ಯ ಸುರಕ್ಷಾ ಅಧಿಕಾರಿಯಾದ ನಾಲ್ಕು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ ಶ್ರೀಮತಿ ಪುಷ್ಪವಲ್ಲಿ ಪೆರಿಯಡ್ಕರವರಿಗೆ ನೀಡಿ ಗೌರವಿಸಲಾಯಿತು. ಜೇಸಿಯೇತರ ಮತ್ತು ಜೇಸಿಯ ಸದಸ್ಯರಾಗಿ ಮಹಿಳಾ ಸಾಧಕರಿಗೆ ನೀಡುವ, ” ನಮನ ” ಗೌರವವನ್ನು ಶ್ರೀಮತಿ ಜಯಂತಿ ಮತ್ತು ಶ್ರೀಮತಿ ಲವೀನಾ ಪಿಂಟೊ ರವರಿಗೆ ನೀಡಿ ಗೌರವಿಸಲಾಯಿತು. “ನನ್ನ ಹೆಜ್ಜೆ” ಅನ್ನುವ ಜೇಸಿ ಕಾರ್ಯಕ್ರಮದ ಯುವ ಸಾಧಕಿ ಅಡಿಯಲ್ಲಿ ಗೌರವಾರ್ಪಣೆಯನ್ನು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಉಷಾ ಮುಳಿಯ ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಘಟಕದ “ನನ್ನ ಜೇಸಿ-ನನ್ನ ಕೊಡುಗೆ “ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೇಸಿ.ಮೋಹನ್ ಚಂದ್ರ ತೋಟದ ಮನೆ ವಹಿಸಿ, ಪ್ರಸ್ತಾಪನೆಯೊಂದಿಗೆ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷರಾದ ವಿಶ್ವನಾಥ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರುಗಳಾದ ಪ್ರಶಾಂತ್ ಕುಮಾರ್ ರೈ, ಮೋನಪ್ಪ ಪಮ್ಮನ ಮಜಲು, ಶಶಿಧರ್ ನೆಕ್ಕಿಲಾಡಿ, ಕೋಶಾಧಿಕಾರಿ ಸುರೇಶ್, ಮಹೇಶ್ ಖಂಡಿಗ, ವೆರೊನಿಕಾ ವೇಗಸ್, ಗೀತಾ, ಅನಿತಾ ಜೇಮ್ಸ್, ಡಯಾನ ಮೇರಿ, ಮೊಲಿ, ಲವೀಟಾ ಡಿಸೋಜ ಉಪಸ್ಥಿತರಿದ್ದರು. ಜೇಸಿವಾಣಿಯನ್ನು ಜೇಸಿ.ಉಮೇಶ್ ಆಚಾರ್ಯ ಉದ್ಘೋಷಿಸಿದರು. ಕಾರ್ಯದರ್ಶಿ ಜೇಸಿ.ಲವಿನಾ ಪಿಂಟೊ ಆತಿಥ್ಯ ನೀಡಿ, ಧನ್ಯವಾದ ಸಲ್ಲಿಸಿದರು.