ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಕೊಕ್ಕಡ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಭೇಟಿ.

ಶೇರ್ ಮಾಡಿ

ನೇಸರ ಮಾ.09: ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಕೊಕ್ಕಡದ ಎಂಡೋಸಲ್ಫಾನ್ ಸಂತ್ರಸ್ತರ ಪಾಲನಾ ಕೇಂದ್ರಕ್ಕೆ ಮಾ.8ರಂದು ಭೇಟಿ ನೀಡಿ ಪೋಷಕರೊಂದಿಗೆ ಸಮಾಲೋಚನೆ ನಡೆಸಿದರು. ಪಾಲನ ಕೇಂದ್ರದಲ್ಲಿ ಅನೇಕ ಕುಂದು ಕೊರತೆಗಳಿದ್ದು, ಸಂತ್ರಸ್ಥರ ಪೋಷಕರು ಅಧಿಕಾರಿಗಳ ಮುಂದೆ ಸಮಸ್ಯೆಯನ್ನು ಬಗೆಹರಿಸಲು ವಿನಂತಿಸಿದರು.

ಪಾಲನ ಕೇಂದ್ರದ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳು
ಎಂಡೋಸಲ್ಫಾನ್ ಸಂತ್ರಸ್ತರಿಗೆ ಆರೋಗ್ಯ ಚಿಕಿತ್ಸಾ ವೆಚ್ಚವನ್ನು ಸರಕಾರದಿಂದ ಭರಿಸುವ ವ್ಯವಸ್ಥೆಯಿದ್ದರೂ ಕಳೆದ ಆರು ತಿಂಗಳುಗಳಿಂದ ಎಂಡೋ ಸಂತ್ರಸ್ತರ ಪೋಷಕರೇ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದ್ದಾರೆ. ದಿನನಿತ್ಯ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಪೋಷಕರಿಗೆ ಇದು ತೀರಾ ಹೊರೆಯಾಗಿ ಕಾಣಲಾರಂಭಿಸಿದೆ. ಕೊಕ್ಕಡದ ಭುವನ್ ಎಂಬ ಸಂತ್ರಸ್ತ ಬಾಲಕನಿಗೆ ಸ್ಮಾರ್ಟ್ ಕಾರ್ಡ್ ಆಗಲಿ ಮಾಸಾಶನವಾಗಲಿ ಇದುವರೆಗೆ ಲಭಿಸಿಲ್ಲ. ಎಂಡೋ ಸಂತ್ರಸ್ತರನ್ನು ನಿಭಾಯಿಸಲು ಕೇಂದ್ರದಲ್ಲಿ ಓರ್ವ ಹೆಚ್ಚುವರಿ ಪಾಲಕರನ್ನು ನೇಮಿಸಬೇಕು. ಪ್ರಸ್ತುತ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಕೇಂದ್ರಕ್ಕೆ ಒಂದು ಜನರೇಟರನ್ನು ಕೊಡಿಸುವಂತೆ ಕೇಳಿಕೊಳ್ಳಲಾಯಿತು. ಕೇಂದ್ರ ಸರ್ಕಾರದ ಯೋಜನೆಯಂತೆ ಯುಡಿಐಡಿ ಕಾರ್ಡ್ ನೀಡುವ ಕಾರ್ಯವನ್ನು ಶೀಘ್ರವಾಗಿ ಸಂತ್ರಸ್ತರಿಗೆ ಕೊಡಿಸಲು ಪ್ರಯತ್ನಿಸಬೇಕು ಎನ್ನಲಾಯಿತು.

🔆 ಮಾ.9 ರಂದು ರಾತ್ರಿ 8:30 ಕ್ಕೆ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನದ ನೇರ ಪ್ರಸಾರ🔆
💢ತಪ್ಪದೆ ವೀಕ್ಷಿಸಿ Subscribers ಮಾಡಿ💢

ಇದಕ್ಕೆ ಪ್ರತಿಕ್ರಿಸಿದ ಅಧಿಕಾರಿಗಳು ಕೇಂದ್ರದಲ್ಲಿ ಜನರೇಟರ್ ವ್ಯವಸ್ಥೆಯನ್ನು ಕೂಡಲೇ ಕಲ್ಪಿಸಿಕೊಡಲಾಗುವುದು. ಈ ಕೂಡಲೇ ಜಾರಿಗೆ ಬರುವಂತೆ ವೈದ್ಯಕೀಯ ವೆಚ್ಚವನ್ನು ಭರಿಸುವ ವ್ಯವಸ್ಥೆಯನ್ನು ಮಾಡಿ ಕೊಡಲಾಗುವುದು ಎಂದರು. ಎಂಆರ್‌ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂ ಕಾರ್ಯಕರ್ತರು ಮಲಗಿದಲ್ಲೇ ಇರುವ ಎಂಡೋಸಲ್ಫಾನ್ ಸಂತ್ರಸ್ತರ ಮನೆಗೆ ತಿಂಗಳಿಗೆ ಒಂದು ಭಾರಿಯಂತೆ ಭೇಟಿ ನೀಡಿ ಅವರ ಸಮಸ್ಯೆಯನ್ನು ಆಲಿಸಬೇಕು. ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರು ಹಾಗೂ ಪ್ರಸೂತಿ ತಜ್ಞರನ್ನು ನೇಮಿಸುವ ಬಗ್ಗೆ ಭರವಸೆ ನೀಡಿದರು. ಹಳೆಯ ಆರೋಗ್ಯ ಕೇಂದ್ರದ ಕಟ್ಟಡವನ್ನು ಶಾಶ್ವತವಾಗಿ ಎಂಡೋಸಲ್ಫಾನ್ ಕೇಂದ್ರವನ್ನಾಗಿಸುವ ಬಗ್ಗೆ ಸ್ಥಳ ಪರಿಶೀಲಿಸಲಾಯಿತು. ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಎಂಡೋ ಸಂತ್ರಸ್ಥರ ಸಮೀಕ್ಷೆ ನಡೆಸಿ ನಿರಂತರ ಯಾವ ಯಾವ ಔಷಧಿಗಳನ್ನು ಉಪಯೋಗಿಸುತ್ತಿದ್ದಾರೆ ಎಂಬುದನ್ನು ಸಮೀಕ್ಷೆ ನಡೆಸಿ ಮುಂದೆ ಅವರ ಮನೆಗೆ ಔಷದಿ ದೊರೆಯವಂತೆ ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಕಲಾಮಧು ಶೆಟ್ಟಿ, ಕೊಕ್ಕಡ ವೈದ್ಯಾಧಿಕಾರಿ ಡಾ.ಪ್ರಕಾಶ್, ಕೊಕ್ಕಡ ಗ್ರಾ.ಪಂ ಅದ್ಯಕ್ಷ ಯೋಗೀಶ್ ಆಲಂಬಿಲ, ಎಂಡೋಸಲ್ಫಾನ್ ನೋಡಲ್ ಅಧಿಕಾರಿ ನವೀನ್ ಕುಲಾಲ್, ಕಂದಾಯ ಅಧಿಕಾರಿ ಪವಾಡಪ್ಪ ದೊಡ್ಡಮನಿ ಇನ್ನಿತರರು ಉಪಸ್ಥಿತರಿದ್ದರು.

 

—ಜಾಹೀರಾತು—

Leave a Reply

error: Content is protected !!