ಕಡಬ : ಧರ್ಮಸ್ಥಳ ಶೌರ್ಯ ಘಟಕದಿಂದ ಪಿಜಕಳ ಶಾಲೆಯಲ್ಲಿ ಶ್ರಮದಾನ

ಶೇರ್ ಮಾಡಿ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಕಡಬ ತಾಲೂಕಿನ ಪಿಜಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಸಲಾಯಿತು.

ಶಾಲೆಯ ನವೀಕರಣ ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಶ್ರಮದಾನ ಕಾರ್ಯಕ್ರಮ ಆಯೋಜಿಸಲಾಯಿತು.

ಧರ್ಮಸ್ಥಳ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಬಾಬು ನಾಯ್ಕರವರು ಹಾಗೂ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಶ್ರಮದಾನ ಸ್ಥಳಕ್ಕೆ ಭೇಟಿ ನೀಡಿ ಶೌರ್ಯ ಘಟಕದ ಸೇವಾ ಕಾರ್ಯಗಳನ್ನು ಪರಿಶೀಲಿಸಿ, ಕಾರ್ಯನಿರ್ವಾಹಕರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ವೆಂಕಟರಮಣ ಕೆ., ಶಿಕ್ಷಕವೃಂದ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆಶ್ರಫ್ ಹಾಗೂ ಸದಸ್ಯರಾದ ದಯಾನಂದ ಗೌಡ ಪಿ., ಸೇವಾಪ್ರತಿನಿಧಿ ನಳಿನಿ ಪಿ. ಅವರು ಪಾಲ್ಗೊಂಡರು.

ಶೌರ್ಯ ಘಟಕದ ಧನಂಜಯ, ಮುರಳಿ, ವೇಣುಗೋಪಾಲ, ಲೋಕೇಶ್, ಆನಂದ ಪಿ., ಲಲಿತಾ, ಆನಂದ ಕೆ., ಉಮೇಶ್, ದಯಾನಂದ ಮತ್ತು ನಳಿನಿ ಪಿ. ಅವರು ಶಾಲೆಯ ಹಳೆಯ ಮೇಲ್ಚಾವಣಿ ರಿಪೇರಿಯನ್ನು ಶ್ರಮದಾನ ಮೂಲಕ ಮಾಡಿದರು.

  •  

Leave a Reply

error: Content is protected !!