ಕಳೆಂಜ 309 ಸರ್ವೆ ಸಂಖ್ಯೆಯ ಭೂಮಿ ವಿವಾದಕ್ಕೆ ಗ್ರಾಮಸ್ಥರಿಂದ ಉಸ್ತುವಾರಿ ಸಚಿವರ ಭೇಟಿ

ಶೇರ್ ಮಾಡಿ

ಕೊಕ್ಕಡ: ಕಳೆಂಜ ಗ್ರಾಮದ 309 ಸರ್ವೆ ನಂಬರ್‌ನ ಅರಣ್ಯ ಹಾಗೂ ಕಂದಾಯ ಭೂಮಿಯ ವಿವಾದಕ್ಕೆ ಕೊನೆ ಕೊಡುವಂತೆ ಮರು ಜಂಟಿ ಸರ್ವೆ ನಡೆಸಿ, ಹಕ್ಕುಪತ್ರ ವಿತರಣೆಗೆ ಕ್ರಮಕೈಗೊಳ್ಳುವಂತೆ ಸ್ಥಳೀಯ ನಿವಾಸಿಗಳು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಮಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರು ಕೂಡ ಜೊತೆಗಿದ್ದು, ಗ್ರಾಮಸ್ಥರ ಹಕ್ಕುಪತ್ರ ಸಮಸ್ಯೆ ಬಗ್ಗೆ ಸಚಿವರಿಗೆ ಸಮಗ್ರ ಮಾಹಿತಿ ನೀಡಿದರು. ತಕ್ಷಣ ಸಮಸ್ಯೆಗೆ ಸ್ಪಂದಿಸಿದ ಸಚಿವರು 309 ಸರ್ವೆ ನಂಬರ್‌ನ ಮರುಸರ್ವೆ ಕಾರ್ಯಕ್ಕೆ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಸಂತ್ರಸ್ತರಾದ ಜೋಮೆಟ್ ಮ್ಯಾಥ್ಯೂ ಮಾಣಿಗೇರಿ, ಅಜೇಶ್, ದಿಲೀಪ್ ಹಾಗೂ ಕೃಷ್ಣಪ್ಪ ಉಪಸ್ಥಿತರಿದ್ದರು.

  •  

Leave a Reply

error: Content is protected !!