ಬೆಳ್ತಂಗಡಿ: ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೊಳಿಸುವಂತೆ ಬಿಜೆಪಿ ಪ್ರತಿಭಟನೆ

ಶೇರ್ ಮಾಡಿ

ಬೆಳ್ತಂಗಡಿ: ಕುಪೆಟ್ಟಿ-ಉಪ್ಪಿನಂಗಡಿ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಸಚಿವರಿಗೆ ಆರು ಭಾರಿ ಮನವಿ ಮಾಡಿದರು ಒಂದು ರೂಪಾಯಿ ಅನುದಾನ ಈ ರಸ್ತೆಯ ಅಭಿವೃದ್ಧಿಗೆ ಬಿಡುಗಡೆ ಮಾಡಿಲ್ಲ. ವಾಣಿಜ್ಯ, ಶೈಕ್ಷಣಿಕ, ಸಹಿತ ಹಲವಾರು ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು ಎಂದು ಅನುದಾನ ನೀಡಲು ಬೇಡಿಕೆ ಮಾಡಿದ್ದೇನೆ. ನಮ್ಮ ಕೂಗೂ ಸರಕಾರದ ಕಿವಿಗೆ ಬೀಳದೆ ಹೋಗಿದೆ, ಎರಡು ಮೂರು ಕಾಂಟ್ರಕ್ಟರ್‌ಗಳಲ್ಲಿ ಮಾತನಾಡಿ ಹೊಂಡಗಳಿಗೆ ಜಲ್ಲಿ ಹುಡಿ ಹಾಕುವ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಕಣಿಯೂರು ಮಹಾಶಕ್ತಿ ಕೇಂದ್ರ ನೇತೃತ್ವದಲ್ಲಿ ಉಪ್ಪಿನಂಗಡಿ – ಬೆಳ್ತಂಗಡಿ ಮುಖ್ಯ ರಸ್ತೆಯ ಕುಪ್ಪೆಟ್ಟಿ -ಕಲ್ಲೇರಿ – ಉಪ್ಪಿನಂಗಡಿ ತನಕ ಸಂಚಾರಕ್ಕೆ ಯೋಗ್ಯವಿಲ್ಲದೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿರುವ ಸಮಸ್ಯೆ ಮತ್ತು ರಾಜ್ಯ ಸರ್ಕಾರ ಈವರೆಗೆ ಯಾವುದೇ ಅನುದಾನ ನೀಡದೆ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದು ರಸ್ತೆಯೂ ಕೆರೆಯಂತಾಗಿದ್ದು ಜನ ಓಡಾಡಲು ಕಷ್ಟಪಡುತ್ತಿರುವ ಕುರಿತು ರಾಜ್ಯ ಸರ್ಕಾರ ಆದಷ್ಟು ಬೇಗ ಅನುದಾನ ನೀಡಿ ರಸ್ತೆ ಸರಿ ಪಡಿಸುವಂತೆ ಕಲ್ಲೇರಿ ಪೇಟೆಯಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲೆಯ, ತಾಲೂಕಿನ ಒಬ್ಬ ಆಮದು ನಾಯಕ ಮತ್ತು ಕಣಿಯೂರು ಜಿ.ಪಂ.ನಿAದ ಮಂಗಳೂರಿಗೆ ರಫ್ತು ಆಗಿರುವ ನಾಯಕ. ಈ ಇಬ್ಬರು ನಾಯಕರು ಕಲ್ಲೇರಿ ಪೇಟೆಗೆ ಲೋಕೋಪಯೋಗಿ ಇಲಾಖೆ ಸಚಿವರನ್ನು ಕರೆದುಕೊಂಡು ಬಂದರು, ಸಚಿವರೂ ಖುದ್ಧಾಗಿ ಬಂದು ಈ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಲು ಆಗಿಲ್ಲವೆಂದರೆ ಇದು ಸಚಿವರು ಲೋಪವಲ್ಲ, ಸರಕಾರದ ಬೊಕ್ಕಸೆ ಖಾಲಿಯಾಗಿದೆ ಎಂಬುದಕ್ಕೆ ಈ ರಸ್ತೆಯೆ ಉದಾಹರಣೆ. ಸಚಿವರು ಭೇಟಿ ನೀಡಿ ಆರು ತಿಂಗಳು ಕಳೆದರೂ, ಅನುದಾನ ಬಿಡುಗಡೆ ಮಾಡಿಸಲು ಸಾಧ್ಯವಾಗಿಲ್ಲವೆಂದರೆ ಸರಕಾರ ದಿವಾಳಿಯಾಗಿದೆ ಎಂದರು.

ಇದು ಸಂಕೇತಿಕ ಪ್ರತಿಭಟನೆ, ಮುಂದಿನ ದಿನಗಳಲ್ಲಿ ಈ ರಸ್ತೆಯ ಅಭಿವೃದ್ಧಿಗೆ ಸರಕಾರ ಗಮನಹರಿಸದೆಯಿದ್ದರೆ, ಅನುದಾನ ನೀಡದೆ ಇದ್ದಲ್ಲಿ, ಪಾದಯಾತ್ರೆ, ರಸ್ತೆತಡೆ ಹಾಗೂ ಈ ಭಾಗ ಜನರ ಮೂಲಭೂತ ಸೌಕರ್ಯಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಬೇಕು, ಬೇಸಿಗೆಯೊಳಗೆ ಮರು ಡಾಮರೀಕರಣ ಆಗದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ತಣ್ಣೀರುಪಂತ ಪ್ಯಾಕ್ಸ್ ಅಧ್ಯಕ್ಷ ಜಯಾನಂದ ಕಲ್ಲಾಪು, ಪದ್ಮುಂಜ ಪ್ಯಾಕ್ಸ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಬಾರ್ಯ ಪ್ಯಾಕ್ಸ್ ಅಧ್ಯಕ್ಷ ಪ್ರವೀಣ್ ರೈ ಪೊರ್ಕಳ, ಕಣಿಯೂರು ಗ್ರಾ.ಪಂ.ಅಧ್ಯಕ್ಷ ಸೀತರಾಮ ಮಡಿವಾಳ, ಬಂದಾರು ಗ್ರಾ.ಪಂ.ಅಧ್ಯಕ್ಷ ದಿನೇಶ್ ಗೌಡ ಖಡಿಂಗ, ಕಣಿಯೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹೇಶ್ ಕೋಟ್ಯಾನ್ ಜೆಂಕ್ಯಾರ್, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕರಾದ ಸುನಿಲ್ ಅಣಾವು, ಜಯಂತಿ ಪಾಲೇದು, ಪದ್ಮುಂಜ ಪ್ಯಾಕ್ಸ್ ಉಪಾಧ್ಯಕ್ಷ ಅಶೋಕ್ ಪಾಂಜಳ, ನಿರ್ದೇಶಕ ಉದಯ್ ಬಿ.ಕೆ, ಇಳಂತಿಲ ಗ್ರಾ.ಪಂ,.ಸದಸ್ಯ ತಿಮ್ಮಪ್ಪ ಗೌಡ, ತಣ್ಣೀರುಪಂತ ಗ್ರಾ.ಪಂ.ಸದಸ್ಯ ಸಾಮ್ರಾಟ್ ಕರ್ಕೇರ ಹಾಗೂ ಅನಿಲ್ ಪಾಲೇದು ಸಹಿತ ಮುಂತಾದವರು ಉಪಸ್ಥಿತರಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣೆಯ ತನಿಖಾ ವಿಭಾಗದ ಎಸ್‌ಐ ಗೋಪಿನಾಥ್ ಭದ್ರತೆ ನೀಡಿದರು.

ಜಿಲ್ಲಾ ಕಾರ್ಯದರ್ಶಿ ಸೀತರಾಮ ಬೆಳಾಲು ಸ್ವಾಗತಿಸಿ, ತಣ್ಣೀರುಪಂತ ಪ್ಯಾಕ್ಸ್ ನಿರ್ದೇಶಕ ಪ್ರಭಾಕರ ಗೌಡ ವಂದಿಸಿ, ಕಣಿಯೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ ನಿರೂಪಿಸಿದರು.

  •  

Leave a Reply

error: Content is protected !!