ನೆಲ್ಯಾಡಿ: ಪುಚ್ಚೇರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಇವಿಎಂ ಮೂಲಕ ಮತದಾನ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪುಚ್ಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025–26ನೇ ಸಾಲಿನ ಶಾಲಾ ಸಂಸತ್‌ ಚುನಾವಣೆ ಇವಿಎಸ್‌ ತಂತ್ರಾಂಶದ (ಇಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್) ಮೂಲಕ ಆಧುನಿಕ ರೀತಿಯಲ್ಲಿ ಆಯೋಜಿಸಲಾಯಿತು. ತಂತ್ರಜ್ಞಾನ ಬಳಸಿ ಮಕ್ಕಳಲ್ಲಿ ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳೇ ಮತದಾರರಾಗಿ ಮತ ಹಾಕಿ ತಮ್ಮ ನಾಯಕರನ್ನು ಆರಿಸಿದರು.

ಈ ವೇಳೆ ಶಾಲಾ ಮುಖ್ಯಮಂತ್ರಿಯಾಗಿ ಎ.ಪಿ.ದವನ್ ಗೌಡ ಮತ್ತು ಉಪ ಮುಖ್ಯಮಂತ್ರಿಯಾಗಿ ಸಾಕ್ಷಿ ಕೆ., ವಿದ್ಯಾ ಮಂತ್ರಿಯಾಗಿ ವರ್ಷ, ಸಾಂಸ್ಕೃತಿಕ ಮತ್ತು ಶಿಸ್ತುಪಾಲನಾಯಾಗಿ ಮಂತ್ರಿ ಸಿಂಚನ, ಕ್ರೀಡಾ ಮಂತ್ರಿಯಾಗಿ ರಕ್ಷಿತ್, ಆರೋಗ್ಯ ಮಂತ್ರಿಯಾಗಿ ಚೈತ್ರಿಕಾ ಡಿ.ಕೆ, ಸಮಯ ಪಾಲನಾ ಮಂತ್ರಿಯಾಗಿ ದಿಶಾನ್, ತೋಟಗಾರಿಕಾ ಮಂತ್ರಿಯಾಗಿ ವಾಟ್ಸನ್, ನೀರಾವರಿ ಹಾಗೂ ಸ್ವಚ್ಛತಾ ಮಂತ್ರಿಯಾಗಿ ಉದಯಚಂದ್ರ ಪಿ, ರಕ್ಷಣಾ ಮಂತ್ರಿಯಾಗಿ ಎಸ್.ಪಿ. ಭುವನ್ ಗೌಡ, ಆಹಾರ ಹಾಗೂ ವಾರ್ತಾ ಪ್ರಸಾರ ಮಂತ್ರಿಯಾಗಿ ಕೃತಿಕಾ, ಸಂಸದೀಯ ವ್ಯವಹಾರ ಮಂತ್ರಿಯಾಗಿ ಪ್ರಸ್ಮಾ ಎಚ್.ಎ, ಸಂಪರ್ಕ ಖಾತೆ ಮಂತ್ರಿಯಾಗಿ ಹಿತೇಶ್, ವಿರೋಧ ಪಕ್ಷದ ನಾಯಕಿಯಾಗಿ ವೀಕ್ಷಾ ಪಿ.ಎಂ ಆಯ್ಕೆಯಾದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭವು ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋಹನ್ ಪಿ, ಉಪಾಧ್ಯಕ್ಷ ಯಶವಂತ ಟಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪಿ, ಪೋಷಕರಾದ ಕುಶಾಲಪ್ಪ ಮತ್ತು ಸೀತಾಲಕ್ಷ್ಮಿ, ಪ್ರಭಾರ ಮುಖ್ಯಶಿಕ್ಷಕ ಪುರಂದರ ಗೌಡ, ಶಿಕ್ಷಕರು ಜಾಹ್ನವಿ, ಯೋಗೀಶ, ದಿನೇಶ್, ರೋಹಿಣಿ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಲಲಿತ ಮತ್ತು ಪೂರ್ಣಿಮ ಉಪಸ್ಥಿತರಿದ್ದರು.

  •  

Leave a Reply

error: Content is protected !!