

ನೆಲ್ಯಾಡಿ: ಕೊಕ್ಕಡ ಅಂಚೆ ಕಚೇರಿಯಲ್ಲಿ ಅಂಚೆಪಾಲಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಬಾಲಕೃಷ್ಣ ಹೊಸಮಜಲು(70) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು (ಜುಲೈ 19) ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ಸೇವಾ ಮನೋಭಾವನೆ, ಕರ್ತವ್ಯನಿಷ್ಠೆ ಹಾಗೂ ಸರಳ ಜೀವನಶೈಲಿಗೆ ಹೆಸರಾಗಿದ್ದರು. ನಿವೃತ್ತಿಯ ಬಳಿಕ ಹೊಸಮಜಲಿನಲ್ಲಿ ಕುಟುಂಬದೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದರು.
ಮೃತರಿಗೆ ಪತ್ನಿ, ಪುತ್ರಿ ಹಾಗೂ ಮೂರು ಗಂಡುಮಕ್ಕಳಿದ್ದಾರೆ.










