

ನೆಲ್ಯಾಡಿ: “ಯಶಸ್ಸು ನಾವು ಅಲಂಕರಿಸುವ ಹುದ್ದೆಯಿಂದಲ್ಲ, ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅವಲಂಬಿತ. ವಿದ್ಯಾರ್ಥಿಗಳು ನಾಳೆ ಎಲ್ಲಿ ಹೋದರೂ, ಎಲ್ಲಿ ಕೆಲಸ ಮಾಡಿದರೂ ನಿಷ್ಠೆಯಿಂದ, ಶ್ರದ್ಧೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು” ಎಂದು ಫಾ.ಜಾರ್ಜ್ ಸ್ಯಾಮುವೆಲ್ ಓ ಐ ಸಿ ಆಶೀರ್ವಾದದ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಅವರು ಬೆಥನಿ ಐಟಿಐ ಯಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಬೆಥನಿ ಸಂಸ್ಥೆ ಶಿಸ್ತು, ಸಮರ್ಪಣೆ ಹಾಗೂ ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನದ ಯಾವುದೇ ಅಂಗಳದಲ್ಲೂ ಯಶಸ್ಸು ಖಚಿತ” ಎಂದರು.
ಸಂಸ್ಥೆಯ ಸಂಚಾಲಕರಾದ ರೆ.ಫಾ. ಜೈಸನ್ ಸೈಮನ್ ಓ ಐ ಸಿ, ಪ್ರಾಚಾರ್ಯರಾದ ಸಜಿ ಕೆ. ತೋಮಸ್, ತರಬೇತಿ ಅಧಿಕಾರಿ ಜಾನ್ ಪಿ.ಎಸ್, ಸಿಬ್ಬಂದಿ ಕಾರ್ಯದರ್ಶಿ ಹರಿಪ್ರಸಾದ್ ರೈ ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಿರಿಯ ತರಬೇತಿ ಅಧಿಕಾರಿಗಳಾದ ಜೇಮ್ಸ್ ಕೆ.ಎ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ವರ್ಗೀಸ್ ಎನ್ ಟಿ ವಂದಿಸಿದರು.










