ಇಚ್ಲಂಪಾಡಿ: ವಿಪರೀತ ಗಾಳಿ ಮಳೆಗೆ ಎಚ್‌ಟಿಇ ಲೈನ್ ಮೇಲೆ ಬಿದ್ದ ಮರ : ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದಿಂದ ತೆರವು

ಶೇರ್ ಮಾಡಿ

ಇಚ್ಲಂಪಾಡಿ: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಇಚ್ಲಂಪಾಡಿ ಪರಿಸರದಲ್ಲಿ ಅಪಾಯದ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಇಚ್ಲಂಪಾಡಿ ಸಮೀಪದ ಕೆಡಂಬೇಲು – ಬಿಜೇರು ರಸ್ತೆಯಲ್ಲಿ ವಿದ್ಯುತ್ ಎಚ್‌ಟಿಇ ಲೈನ್‌ಮೇಲೆ ಮರ ಬಿದ್ದು ಅಪಾಯಕಾರಿಯಾದ ಸ್ಥಿತಿ ಉಂಟಾಗಿತ್ತು.

ಈ ಕುರಿತು ಮಾಹಿತಿ ಪಡೆದ ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ಸಂಘಟನೆಯ ಅಧ್ಯಕ್ಷ ಜೋನ್ಸನ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಸ್ಥಳಕ್ಕೆ ಧಾವಿಸಿ, ಯಾವುದೇ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಮರವನ್ನು ಸುರಕ್ಷಿತವಾಗಿ ತೆರವಿಗೊಳಿಸಿದರು. ಈ ಕಾರ್ಯಾಚರಣೆಯಲ್ಲಿ ಮೆಸ್ಕಾಂ ಇಲಾಖೆಯ ಜೆ.ಯು. ರಮೇಶ್ ಹಾಗೂ ಪವರ್‌ಮ್ಯಾನ್ ಸಂಜು ಉಪಸ್ಥಿತರಿದ್ದು ನಿರ್ವಹಣೆಗೆ ಸಹಕಾರ ನೀಡಿದರು.

  •  

Leave a Reply

error: Content is protected !!