

ಬೆಳ್ತಂಗಡಿ: ಸುಲ್ಕೇರಿ ಗ್ರಾಮದ ಶ್ರೀ ರಾಮ ಶಾಲೆಗೆ ಕರ್ನಾಟಕ ಬ್ಯಾಂಕ್‌ನಿಂದ ಸಾಮಾಜಿಕ ಜವಾಬ್ದಾರಿ ಅನ್ವಯ ಹೊಸ ಬಸ್ಸೊಂದನ್ನು ಉಡುಗೊರೆಯಾಗಿ ನೀಡಲಾಗಿದೆ. ಮಂಗಳೂರು ಪ್ರಧಾನ ಕಚೇರಿಯ ಸಹಾಯಕ ಮುಖ್ಯ ಪ್ರಬಂಧಕರಾದ ವಿಶ್ವನಾಥ್ ಎಸ್.ಆರ್. ಅವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜು ಪೂಜಾರಿ ಅವರಿಗೆ ಬಸ್ಸಿನ ಕೀಲಿಕೈ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಳದಂಗಡಿ ಶಾಖೆಯ ಪ್ರಬಂಧಕ ಹಿತೇಶ್ ಕುಮಾರ್, ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ನಾರಾಯಣ ಪೂಜಾರಿ, ಸದಸ್ಯರಾದ ಯೋಗೀಶ್ ಬೊಳ್ವಾಲು, ದಯಾಕರ್ ರೈ, ಅರವಿಂದ್ ಮೋಟರ್ಸ್‌ನ ನಾಗೇಶ್ ಹಾಗೂ ಶ್ರೀ ರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.










