

ನೆಲ್ಯಾಡಿ: “ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡಿದಲ್ಲಿ ನಮಗೆ ಪ್ರೀತಿ, ವಾತ್ಸಲ್ಯ ದೊರೆಯುತ್ತದೆ. ಕಲೆ-ಸಂಸ್ಕೃತಿಗೆ ಭಾರತ ದೇಶದಲ್ಲಿ ಇರುವಷ್ಟು ಪ್ರೋತ್ಸಾಹ ಬೇರೆಡೆ ಎಲ್ಲಿಯೂ ಇಲ್ಲ. ವಿದ್ಯಾವಂತರಾದವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಹೆತ್ತವರು ಮಕ್ಕಳಿಗೆ ವಿದ್ಯೆ ಹಾಗೂ ಸಂಸ್ಕಾರವನ್ನು ನೀಡುವುದು ಅವರ ಮೊದಲ ಕರ್ತವ್ಯ. ಹಿರಿಯರ ಆಶೀರ್ವಾದ ಇದ್ದಲ್ಲಿ ಜಯ ಸಾಧಿಸಬಹುದು. ನಮ್ಮ ಆಚಾರ ವಿಚಾರಗಳನ್ನು ಬದಲಾಯಿಸಬಾರದು. ನಮ್ಮಲ್ಲಿ ಇರುವ ಸ್ವಲ್ಪವನ್ನು ಸಮಾಜದ ಹಿತಕ್ಕಾಗಿ, ಇತರ ಧರ್ಮದವರಿಗೂ ಸಹಕಾರ ನೀಡಿದಲ್ಲಿ ದೇವರ ಆಶೀರ್ವಾದ ಸದಾ ನಮ್ಮೊಂದಿಗೆ ಇರುತ್ತದೆ” ಎಂದು ಅಬುಧಾಬಿಯಲ್ಲಿ ಉದ್ಯಮಿಯಾಗಿರುವ ಜಯರಾಮ ರೈ ಮಿತ್ರಂಪಾಡಿ ಹೇಳಿದರು.

ನೆಲ್ಯಾಡಿ ವಲಯ ಬಂಟರ ಸಂಘದ ವತಿಯಿಂದ ನೆಲ್ಯಾಡಿ ಕಲ್ಪವೃಕ್ಷ ಸಹಕಾರಿ ಸೌಧದಲ್ಲಿ ಭಾನುವಾರ ನಡೆದ ಬಂಟ ಬಾಂಧವರ “ಆಟಿಡೊಂಜಿ ಬಂಟೆರೆ ಸೇರಿಗೆ” ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಮಾತನಾಡಿ “ನೆಲ್ಯಾಡಿ ವಲಯ ಬಂಟರ ಸಂಘ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ. ಬಂಟರಾಗಿ ಹುಟ್ಟಬೇಕಾದರೆ ಏಳು ಜನ್ಮ ಪುಣ್ಯ ಬೇಕು. ನಮ್ಮಲ್ಲಿ ನಾಯಕತ್ವದ ಗುಣವಿದೆ. ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಬಂಟರು ಸಾಧನೆ ಮಾಡುತ್ತಾರೆ” ಎಂದರು.
ವಲಯದ ಹಿರಿಯ ಬಂಟ ಬಾಂಧವರಾದ ವಿಠಲ ಮಾರ್ಲ ರಾಮನಗರ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಂಗಾಧರ ಶೆಟ್ಟಿ ಅಮ್ಮೆತ್ತಿಮಾರುಗುತ್ತು, ಬೆಂಗಳೂರು ಒನ್ ಸೇವಿಂಗ್ಸ್ ಬ್ಯಾಂಕ್ ಆಫ್ ಇಂಡಿಯಾದ ಪ್ರತೀಕ್ಷ್ ರೈ ಕೊಣಾಲುಗುತ್ತು, ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಪುತ್ತೂರು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ಶೆಟ್ಟಿ, ಕಾರ್ಯದರ್ಶಿ ಕುಸುಮಾ ಪಿ. ಶೆಟ್ಟಿ ಸಂದರ್ಬೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಮಾತೃ ಸಂಘದ ನಿರ್ದೇಶಕಿ ವಾಣಿ ಸುಂದರ ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ, ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀಮಾತಾ, ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋಂತಿಲ ಉಪಸ್ಥಿತರಿದ್ದರು.
ಸನ್ಮಾನ:
ದೈವರಾಧಕರು ಹಾಗೂ ದೇವರಾಧನೆಯ ಮಧ್ಯಸ್ಥ ರಘುನಾಥ ರೈ ಹಾರ್ಪಳಗುತ್ತು, 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಧನ್ವಿ ಶೆಟ್ಟಿ ದೋಂತಿಲ ಪರವಾಗಿ ಅವರ ತಾಯಿ ರಮ್ಯಶ್ರೀ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಸ್ವಜಾತಿ ಬಾಂಧವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಬಂಟ ಬಾಂಧವರಿಗೆ ಒಳಾಂಗಣ ಆಟೋಟ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಪುತ್ತೂರು ಕಾರ್ಯಕಾರಿ ಸಮಿತಿಯ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಪುತ್ತೂರು ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು, ಇಂದುಶೇಖರ ಶೆಟ್ಟಿ, ರವಿ ಪ್ರಸಾದ ರೈ, ಗಣೇಶ ರೈ ನೆಲ್ಲಿಕಟ್ಟೆ, ಕರುಣಾಕರ ರೈ, ಜಯಪ್ರಕಾಶ್ ರೈ ನೂಜಿಬೈಲು, ವಿನೋದ್ ಕುಮಾರ್ ಮನವಳಿಕೆಗುತ್ತು, ಪೆರಾಬೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಮೋಹನ ದಾಸ್ ರೈ ಪರಾರಿಗುತ್ತು, ಅರಸಿನಮಕ್ಕಿ ಬಂಟರ ಸಂಘದ ಗೌರವಾಧ್ಯಕ್ಷ ರಮನಾಥ ರೈ, ವಲಯ್ಯಾಧ್ಯಕ್ಷ ಲಕ್ಷ್ಮೀನಾರಾಯಣ ರೈ ಬೀಡು, ಹಿರಿಯ ಸದಸ್ಯ ಶ್ರೀನಿವಾಸ ರೈ, ಕೋಶಾಧಿಕಾರಿ ಸಂತೋಷ ಶೆಟ್ಟಿ, ನೆಲ್ಯಾಡಿ ಸಂಘದ ಕೋಶಾಧಿಕಾರಿ ಆನಂದ ಶೆಟ್ಟಿ ಇಚ್ಚಂಪಾಡಿ, ಸಂಚಾಲಕ ರತ್ನಾಕರ ಶೆಟ್ಟಿ ಕೊಲ್ಯೊಟ್ಟು, ಜೊತೆ ಕಾರ್ಯದರ್ಶಿ ನಮಿತಾ ಸದಾನಂದ ಶೆಟ್ಟಿ, ಶೀಲಾ ಯಶೋಧರ ಶೆಟ್ಟಿ ಹಾಗೂ ಪದಾಧಿಕಾರಿಗಳು ಸರ್ವ ಸದಸ್ಯರು, ಸ್ವಜಾತಿ ಬಾಂಧವರು ಉಪಸ್ಥಿತರಿದ್ದರು.
ಸನ್ಮಾನಿತರ ಪರಿಚಯವನ್ನು ಜೀವಿತ ಪೇರಣ ಹಾಗೂ ನಮಿತ ಶೆಟ್ಟಿ, ಪ್ರತಿಭಾ ಪುರಸ್ಕಾರ ಪಟ್ಟಿಯನ್ನು ಚಿನ್ಮಯಿ ಶೆಟ್ಟಿ, ಬಹುಮಾನ ವಿಜೇತರ ಪಟ್ಟಿಯನ್ನು ಸಾಯಿಧೃತಿ ವಾಚಿಸಿದರು. ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಹಾಬಲ ಶೆಟ್ಟಿ ವಂದಿಸಿದರು.










