ಕೊಕ್ಕಡ ಪ್ರೌಢಶಾಲೆಯಲ್ಲಿ ಅದ್ದೂರಿ 79ನೇ ಸ್ವಾತಂತ್ರ್ಯೋತ್ಸವ – ಶಿಕ್ಷಣಪ್ರೇಮಿಗಳಿಗೆ ಸನ್ಮಾನ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಸರ್ಕಾರಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ ಉತ್ಸಾಹದ ಮಧ್ಯೆ ಅದ್ದೂರಿಯಾಗಿ ಆಚರಿಸಲಾಯಿತು.

ಕೊಕ್ಕಡ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿಶ್ವನಾಥ ರೈ ಅವರು ತ್ರಿವರ್ಣ ಧ್ವಜವನ್ನು ಗೌರವಪೂರ್ವಕವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ನಮ್ಮ ಪೂರ್ವಜರ ತ್ಯಾಗದ ಫಲ. ಇಂದು ನಾವು ಆ ತ್ಯಾಗವನ್ನು ಸ್ಮರಿಸಿ, ನೂತನ ಭಾರತ ನಿರ್ಮಾಣದ ಹೊಣೆ ಹೊತ್ತು ಮುಂದೆ ಸಾಗಬೇಕಾಗಿದೆ. ವಿದ್ಯಾರ್ಥಿಗಳು ಕೇವಲ ಪುಸ್ತಕ ಜ್ಞಾನವಲ್ಲ, ನೈತಿಕ ಮೌಲ್ಯಗಳು ಹಾಗೂ ಸಮಾಜ ಸೇವೆಯ ಮನೋಭಾವವನ್ನು ಬೆಳೆಸಿಕೊಂಡು ರಾಷ್ಟ್ರಾಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮೇಶ ಕುಡಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಿಕ್ಷಣ ಪ್ರೇಮಿಗಳಾದ ಇಸ್ಮಾಯಿಲ್ ಹಾಜಿ, ದಾಮೋದರ,ಉಮ್ಮರ್ ಹಾಗೂ ಅಬೂಬಕ್ಕರ್ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ಕೊಕ್ಕಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆಸಿಫ್, ಕಾಲೇಜಿನ ಉಪನ್ಯಾಸಕರು ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಪದಾದಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದರು.

ಮುಖ್ಯಶಿಕ್ಷಕಿ ರೀನಾ ಸ್ವಾಗತಿಸಿದರು. ದೈಹಿಕಶಿಕ್ಷಕಿ ಬೀನಾ ವಂದಿಸಿದರು. ವಿದ್ಯಾರ್ಥಿಗಳಾದ ದಿವ್ಯಶ್ರೀ ಮತ್ತು ಸಹಲಾ ಕಾರ್ಯಕ್ರಮವನ್ನು ನಿರೂಪಿಸಿದರು.

  •  

Leave a Reply

error: Content is protected !!