

ಮಂಗಳೂರು: ದೇರಳಕಟ್ಟೆ ಮುತ್ತೂಟ್ ಪೈನಾನ್ಸ್ ಬ್ಯಾಂಕ್ ಕಳ್ಳತನ ಯತ್ನ ಪ್ರಕರಣದಲ್ಲಿ ದಸ್ತಗಿರಿಯಾಗದೇ ಪಾರಾಗಿದ್ದ ಪ್ರಮುಖ ಆರೋಪಿಯೊಬ್ಬನು ಕೊನೆಗೂ ಕಾನೂನು ಬಲೆಗೆ ಸಿಕ್ಕಿದ್ದಾನೆ.
ಮಂಗಳೂರು ನಗರ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕುಂಡು ತಾಲ್ಲೂಕಿನ ಅಬ್ದುಲ್ ಲತೀಫ್ @ ಲತೀಫ್ (47), ಎಂಬಾತನನ್ನು ಬಂಧಿಸಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಈತನ ವಿರುದ್ಧ ಇತ್ತೀಚಿನ ಮುತ್ತೂಟ್ ಪೈನಾನ್ಸ್ ಕಳ್ಳತನ ಯತ್ನ, ಕೇರಳದ ರಾಜಧಾನಿ ಜುವೆಲ್ಲರಿ ಶಾಪ್ ನಿಂದ 20 ಕೆಜಿ ಬಂಗಾರದ ದರೋಡೆ, ಚೆರವತ್ತೂರು ವಿಜಯ ಬ್ಯಾಂಕ್ ನಿಂದ 15.80 ಕೆಜಿ ಬಂಗಾರ ಹಾಗೂ ₹2.5 ಲಕ್ಷ ನಗದು ದೋಚಿದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಈ ಹಿಂದೆ ಈ ಪ್ರಕರಣದಲ್ಲಿ ಮುರಳಿ ಇಡುಕ್ಕಿ ಮತ್ತು ಆರ್ಷದ್ ಕಾಂಞಿಗಾಡ್ ದಸ್ತಗಿರಿಯಾಗಿದ್ದರೆ, ಇದೀಗ ಮುಖ್ಯ ಸಂಚುಕೋರನೂ ಬಂಧನಕ್ಕೊಳಗಾಗಿದ್ದಾನೆ.
ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.











