

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇವುಗಳ ಆಶ್ರಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಆ.22 ರಂದು ಕೊಣಾಲು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.

ಕೊಣಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಕಾರ್ಯಧ್ಯಕ್ಷರಾದ ಪ್ರಸಾದ್ ಅಬ್ರಾಹಂ.ಎ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೋಳಿತೊಟ್ಟು ವಲಯಾಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ ಮಾತನಾಡಿ ಜನಜಾಗೃತಿಯ ಮೂಲಕ ಅದೆಷ್ಟೋ ಕುಟುಂಬಗಳು ದುಶ್ಚಟಗಳಿಂದ ದೂರವಾಗಿ ನೆಮ್ಮದಿಯ ಬದುಕನ್ನು ನಡೆಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ. ಮಾತ್ರವಲ್ಲದೇ ಮಕ್ಕಳಲ್ಲಿ ಸ್ವಾಸ್ಥ್ಯವನ್ನು ಮೂಡಿಸಿವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ನಡೆಸುವುದು ಅಭಿನಂದನಿಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿರುವ ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇದರ ಅಧ್ಯಕ್ಷ, ಶಿಕ್ಷಕ ಗಿರಿಶಂಕರ ಸುಲಾಯ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯಕರ ಸಮಾಜದ ನಿರ್ಮಾಣದ ಕಡೆ ಒತ್ತನ್ನು ನೀಡಬೇಕು ಆಗ ಮಾತ್ರ ಸಮಾಜ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಿದೆ.ಮಕ್ಕಳು ಮಾದಕ ವ್ಯಸನ ಮತ್ತು ದುಶ್ಚಟಗಳಿಂದ ದೂರವಿದು ಸದೃಢ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು.ಶಿಕ್ಷಣ ಕೇವಲ ವಿದ್ಯೆಗೆ ಸೀಮತವಾಗದೇ ತಂದೆ -ತಾಯಿಯನ್ನು ಪ್ರೀತಿಸುವ ಸಂಸ್ಕಾರ ಬೆಳೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕೊಣಾಲು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್ ಕುಮಾರ್, ಗೋಳಿತೊಟ್ಟು ವಲಯದ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಅಲೆಕ್ಕಿ, ಸರಕಾರಿ ಪ್ರೌಢ ಶಾಲೆ ಕೊಣಾಲಿನ ಮುಖ್ಯ ಶಿಕ್ಷಕರಾದ ಶಶಿಧರ ಶೆಟ್ಟಿ, ಶಾಲಾ ಮೇಲುಸ್ತುವರಿ ಸಮಿತಿಯ ಅಧ್ಯಕ್ಷರಾದ ಕಮಲಾಕ್ಷ ಪಂಡಿತ್, ಕೊಣಾಲು ಒಕ್ಕೂಟದ ಅಧ್ಯಕ್ಷರಾದ ಲಿತಿನ್ ಕುಮಾರ್, ಕೋಲ್ಪೆ ಒಕ್ಕೂಟದ ಆಧ್ಯಕ್ಷರಾದ ಕುಮಾರನ್, ಗೋಳಿತೊಟ್ಟು ಜನಜಾಗೃತಿಯ ವಲಯ ಸದಸ್ಯರಾದ ವೆಂಕಪ್ಪ ಗೌಡ ಡೆಬ್ಬೇಲಿ ಮೊದಲಾದವರು ವೇದಿಕೆಯ ಉಪಸ್ಥಿತರಿದ್ದರು. ಗೋಳಿತೊಟ್ಟು ವಲಯದ ಮೇಲ್ಷಿಚಾರಕಾರದ ಜಯಶ್ರೀ ಸ್ವಾಗತಿಸಿ, ಸೇವಾಪ್ರತಿನಿಧಿ ಪ್ರತಿಮಾ ವಂದಿಸಿದರು. ಸೇವಾಪ್ರತಿನಿಧಿ ಹೇಮಾಲತಾ ಸಹಕರಿಸಿದರು.











