ನೆಲ್ಯಾಡಿ ಸಾಪಿಯೆನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜುನಲ್ಲಿ “Personal Contact And Facilitation Campaign 2021-22” ಮಾಹಿತಿ ಕಾರ್ಯಗಾರ

ಶೇರ್ ಮಾಡಿ

ನೇಸರ ಮಾ.11: ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ಕಡಬ ತಾಲೂಕು ಯುವಜನ ಒಕ್ಕೂಟ ಹಾಗೂ ಗೆಳೆಯರ ಬಳಗ ಗಾಂಧಿ ಮೈದಾನ(ರಿ.), ನೆಲ್ಯಾಡಿ ಯುವಕ ಮಂಡಲ ಇದರ ಜಂಟಿ ಆಶ್ರಯದಲ್ಲಿ ಮಾ.10ರಂದು ಸಾಪಿಯೆನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜು ನೆಲ್ಯಾಡಿನಲ್ಲಿ “Personal Contact And Facilitation Campaign 2021-22” ಮಾಹಿತಿ ಕಾರ್ಯಗಾರ ನಡೆಯಿತು.

ವೀಕ್ಷಿಸಿ Subscribers ಮಾಡಿ

ಕಾರ್ಯಕ್ರಮದ ಉದ್ಘಾಟನೆಯನ್ನು ರಘುವೀರ್ ಸೂಟರ್ ಪೇಟೆ, ಜಿಲ್ಲಾ ಯುವ ಅಧಿಕಾರಿ ನೆಹರೂ ಯುವ ಕೇಂದ್ರ ಮಂಗಳೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ರೇ.ಫಾ.ಸತ್ಯನ್ ತೋಮಸ್ OIC ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುರೇಶ್ ರೈ ಸೂಡಿಮುಳ್ಳು ಅಧ್ಯಕ್ಷರು ದ.ಕ. ಜಿಲ್ಲಾ ಯುವಜನ ಒಕ್ಕೂಟ(ರಿ) ಮಂಗಳೂರು. ಶಿವಪ್ರಸಾದ್ ರೈ ಮೈಲೇರಿ ಅಧ್ಯಕ್ಷರು ಕಡಬ ತಾಲೂಕು ಯುವಜನ ಒಕ್ಕೂಟ. ರೇ.ಫಾ.ಮೆಲ್ವಿನ್ ಮ್ಯಾಥ್ಯು OIC ಪ್ರಾಂಶುಪಾಲರು ಸಾಪಿಯೆನ್ಸಿಯ ಬೆಥನಿ ಕಾಲೇಜು ನೆಲ್ಯಾಡಿ. ಜಯಾನಂದ ಬಂಟ್ರಿಯಾಲ್ ನಿರ್ದೇಶಕರು ಕಡಬ ಯುವಜನ ಒಕ್ಕೂಟ. ರತ್ನಾಕರ ಶೆಟ್ಟಿ ಅಶ್ವಮೇಧ ಅಧ್ಯಕ್ಷರು ಗೆಳೆಯರ ಬಳಗ ಗಾಂಧಿ ಮೈದಾನ ನೆಲ್ಯಾಡಿ. ರಿಕ್ಸನ್ ಗಲ್ಬ್ ವೂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಉಷಾ ನಾಯಕ್ ತರಬೇತುದಾರರು ಬೆಳ್ತಂಗಡಿ ಇವರು ವಿದ್ಯಾರ್ಥಿಗಳಿಗೆ ಸರಕಾರದಿಂದ ದೊರೆಯುವ ಸವಲತ್ತುಗಳು ಮತ್ತು ಪದವಿ ನಂತರ ವಿದ್ಯಾರ್ಥಿಗಳು ನಡೆಸಬಹುದಾದ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿ, ಕೌಶಲ್ಯಾಧಾರಿತ ಉದ್ಯೋಗಗಳ ಬಗ್ಗೆ ಪರಿಚಯ ನೀಡಿ ಸರಕಾರ ನೀಡುವ ಸವಲತ್ತುಗಳ ಮಾಹಿತಿ ನೀಡಿದರು. ಮೊಬೈಲ್ ಬಳಕೆಯ ಈ ತಾಂತ್ರಿಕಯುಗದಲ್ಲಿ ಲಾಭಕ್ಕಾಗಿ ಮೊಬೈಲ್ ಬಳಕೆ ಮಾಡುವ ಸಮಯದಲ್ಲಿ ವಂಚನೆಯ ಪ್ರಕರಣದಿಂದ ಜಾಗರೂಕರಾಗಿರಬೇಕು ಎಂದು ಹೇಳಿದರು. ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ. ದೀಕ್ಷಾ ಮ್ಯಾಥ್ಯು ನಿರೂಪಿಸಿದರು. ಸಮ್ಯಕ್ತ ಜೈನ್ ಅಭಿಪ್ರಾಯ ತಿಳಿಸಿದರು. ಸ್ವಾತಿ ಆರ್ ರೈ ಧನ್ಯವಾದ ಸಮರ್ಪಿಸಿದರು.

 

—ಜಾಹೀರಾತು—

 

Leave a Reply

error: Content is protected !!