ಕೊಕ್ಕಡ ಗ್ರಾಮದ ಕೊಡಿಂಗೇರಿ-ಉಪ್ಪಾರಹಳ್ಳದಲ್ಲಿ 3.35 ಕೋಟಿ ರೂ. ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಾಸಕ ಪೂಂಜಾ ಶಿಲಾನ್ಯಾಸ

ಶೇರ್ ಮಾಡಿ

ನೇಸರ ಮಾ.11: ಭೂಮಿಯಲ್ಲಿ ಅಂತರ್ಜಲ ಹೆಚ್ಚಾದಂತೆ ಕೃಷಿಗೆ ಯೋಗ್ಯವಾದ ಭೂಮಿ ಪರಿವರ್ತನೆಗೊಳ್ಳುತ್ತದೆ. ಜಿಲ್ಲೆಯಲ್ಲೇ ಅತೀ ಹೆಚ್ಚು ಕಿಂಡಿ ಅಣೆಕಟ್ಟುಗಳು ತಾಲೂಕಿಗೆ ಮಂಜೂರಾಗಿದ್ದು ಬಹುತೇಕ ಕಾಮಗಾರಿಗಳು ಎಪ್ರಿಲ್ ತಿಂಗಳ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ. ಕೊಡಿಂಗೇರಿ ಎಂಬಲ್ಲಿ ಕಿಂಡಿ ಅಣೆಕಟ್ಟಿನ ಜೊತೆಗೆ ಸೇತುವೆ ನಿರ್ಮಾಣವಾದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಮಾದೇರಿ ಎಂಬಲ್ಲಿಗೆ ಸುಲಭ ಸಂಪರ್ಕ ವ್ಯವಸ್ಥೆಯಾಗುತ್ತದೆ. ಗೋಳಿತೊಟ್ಟು ಹಾಗೂ ಇಲ್ಲಿ ಸೇತುವೆ ನಿರ್ಮಾಣಗೊಳ್ಳಲು ಸುಮಾರು 35 ವರ್ಷಗಳ ಹಿಂದೆ ಕೊಡಿಂಗೇರಿ ರಾಮಣ್ಣಗೌಡರ ಸತತ ಪ್ರಯತ್ನವನ್ನು ಶಾಸಕರು ಸ್ಮರಿಸಿದರು. ಕೊಕ್ಕಡ ನೆಲ್ಯಾಡಿ ಭಾಗದ ಜನತೆಗೆ ಈ ಕಿಂಡಿ ಅಣೆಕಟ್ಟು ಸಹಿತ ಸೇತುವೆಯು ವರವಾಗಲಿದೆ ಹಾಗೂ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರು ಸಹಕರಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು. ಅವರು ಶುಕ್ರವಾರ( ಮಾ.11) ಕೊಕ್ಕಡ ಗ್ರಾಮದ ಕೊಡಿಂಗೇರಿ ಉಪ್ಪಾರಹಳ್ಳ ಎಂಬಲ್ಲಿ ಕಿಂಡಿ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ವೀಕ್ಷಿಸಿ Subscribers ಮಾಡಿ

ಈ ಸಂದರ್ಭ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಆಲಂಬಿಲ, ಗೋಳಿತೊಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷ ಜನಾರ್ಧನ, ಕೊಕ್ಕಡ ಗೋಳಿತೊಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರುಗಳು, ಕೊಕ್ಕಡ ಸಿಎ ಬ್ಯಾಂಕ್ ಅಧ್ಯಕ್ಷ ಕುಶಾಲಪ್ಪಗೌಡ ಪೂವಾಜೆ, ಗ್ರಾ.ಪಂ ಸದಸ್ಯರುಗಳು, ಸ್ಥಳೀಯರು ಉಪಸ್ಥಿತರಿದ್ದರು.

—ಜಾಹೀರಾತು—

Leave a Reply

error: Content is protected !!