ನೇಸರ ಮಾ.11: ಜೇಸಿಐ ಪಂಜ ಪಂಚಶ್ರೀ ವತಿಯಿಂದ “ಕ್ಷಯ ಮುಕ್ತ ಭಾರತ-2025” ಕಾರ್ಯಕ್ರಮ ದಿನಾಂಕ 11.03.2022 ರಂದು ಮಧ್ಯಾಹ್ನ 2.00 ಗಂಟೆಗೆ ಜೇಸಿಐ ಪಂಜ ಪಂಚಶ್ರೀ ಆಶ್ರಯದಲ್ಲಿ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದಕ್ಷಿಣಕನ್ನಡ, ಕ್ಷಯ ಚಿಕಿತ್ಸಾ ಘಟಕ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇದರ ಸಹಯೋಗದೊಂದಿಗೆ ಟಿ.ಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನ ಅಂಗವಾಗಿ ಕ್ಷಯ ಮುಕ್ತ ಭಾರತ 2025 ಕಾರ್ಯಕ್ರಮ ಪದವಿ ಪೂರ್ವ ಕಾಲೇಜಿನ ಗುತ್ತಿಗಾರು ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು ಇದರ ವೈದ್ಯಾಧಿಕಾರಿಗಳು ಆಗಿರುವ ಡಾ.ಚೈತ್ರಭಾನು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಆಗಿರುವ ನೆಲ್ಸನ್ ಡಿ ಕ್ಯಾಸ್ಟಲಿನೊ ಭಾಗವಹಿಸಿದ್ದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಘಟಕದ ಅಧ್ಯಕ್ಷರಾದ ಜೇಸಿ.ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ವೇದಿಕೆಯಲ್ಲಿ ಕ್ಷಯ ಚಿಕಿತ್ಸಾ ಘಟಕ ಸುಳ್ಯ ಇದರ ಹಿರಿಯ ಚಿಕಿತ್ಸಾ ಮೇಲ್ವಿಚಾರಕರು ಆಗಿರುವ ಲೋಕೇಶ್ ತಂಟೆಪ್ಪಾಡಿ, ಕಾರ್ಯಕ್ರಮ ನಿರ್ದೇಶಕ ಜೇಸಿ. ನಿಶಿತ್ ಮುಂಡೋಡಿ ಉಪಸ್ಥಿತರಿದ್ದರು. ಜೇಸಿ.ಗಗನ್ ಕಿನ್ನಿಕುಮೇರಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೇಸಿ.ನಿಶಿತ್ ಮುಂಡೋಡಿ ಜೇಸಿವಾಣಿ ನುಡಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಂಜ ಪಂಚಶ್ರೀ ಸದಸ್ಯರುಗಳಾದ ಜೇಸಿ.ರಜತ್ ಚಿದ್ಗಲ್ಲು, ಜೇಸಿ.ಹರ್ಷಿತ್ ಮುಂಡೋಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರಿನ ಆರೋಗ್ಯ ಸುರಕ್ಷಾ ಧಿಕಾರಿ ಶ್ರೀಮತಿ ಜಯಶ್ರೀ ಮತ್ತು ಪ್ರೌಢಶಾಲಾ ವಿಭಾಗದ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೇಸಿಐ ಪಂಜ ಪಂಚಶ್ರೀ ಯ ಜೊತೆ ಕಾರ್ಯದರ್ಶಿ ವಿಜೇಶ್ ಹಿರಿಯಡ್ಕ ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಕಿರುಚಿತ್ರ ಪ್ರದರ್ಶನ ನಡೆಯಿತು.
—ಜಾಹೀರಾತು—