ನೇಸರ ಮಾ.12:ಆರೋಗ್ಯಕರವಾಗಿರಲು ಒಳ್ಳೆಯ ಆಹಾರ ಅತೀ ಅಗತ್ಯ. ಕರ್ನಾಟಕದಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ಬೇರೆ ಬೇರೆ ಬಗೆಯ ಆಹಾರ ಪದ್ಧತಿಗಳು ಇವೆ. ನಾವು ಸವಿಯುವಂತ ಆಹಾರವು ಶುಚಿಯಾಗಿದ್ದು, ಪೌಷ್ಟಿಕಾಂಶದಿಂದ ಕೂಡಿರಬೇಕು ಎಂದರು. ಆಹಾರ ಮೇಳವನ್ನು ಆಯೋಜಿಸಿರುವ ಮುಖ್ಯ ಉದ್ದೇಶ ಆಹಾರಗಳನ್ನು ಯಾವ ರೀತಿ ಉತ್ಪಾದಿಸಬಹುದು, ಮಾರುಕಟ್ಟೆಯನ್ನು ಯಾವ ರೀತಿ ಮಾಡಬಹುದು. ಮುಂತಾದವುಗಳ ಬಗ್ಗೆ ತಿಳುವಳಿಕೆ ವಿದ್ಯಾರ್ಥಿಗಳಲ್ಲಿ ಮೂಡುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ನೆಲ್ಯಾಡಿ ಸಾಪಿಯೆನ್ಸಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜುನಲ್ಲಿ ನಡೆದ ಆಹಾರ ಮೇಳ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆಗೊಳಿಸಿ ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕ ರೇ.ಫಾ.ಸತ್ಯನ್ ತೋಮಸ್ OIC ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಮ್ಯಾಥ್ಯು OIC ಮಾತನಾಡಿ ಕಾಲೇಜು ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ಮಾಡಿ ಆಹಾರ ಮೇಳವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಲೋಚನೆಗೆ ಅನುಗುಣವಾಗಿ ಆಹಾರವನ್ನು ತಯಾರಿಸಿದ್ದಾರೆ ಎಂದರು. ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಉಪಪ್ರಾಂಶುಪಾಲರಾದ ಫಾ.ಜಿಜನ್.ಕೆ ಅಬ್ರಹಂ, ವಿದ್ಯಾರ್ಥಿ ನಾಯಕಿ ದೀಕ್ಷ ಮ್ಯಾಥ್ಯು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಹರ್ಷಿತಾ ಸ್ವಾಗತಿಸಿದರು, ಸಮ್ಯಕ್ ಧನ್ಯವಾದ ನೀಡಿದರು. ಸ್ಮೃತಿ ಕಾರ್ಯಕ್ರಮ ನಿರೂಪಿಸಿದರು.
—ಜಾಹೀರಾತು—