ಲಾರಿ ನಿಲ್ಲಿಸಿ ರಸ್ತೆ ಬದಿಗೆ ಹೋದ ಚಾಲಕ ಕಾಂಕ್ರಿಟ್ ಚರಂಡಿಗೆ ಬಿದ್ದು ಮೃತ್ಯು

ಶೇರ್ ಮಾಡಿ

ನೆಲ್ಯಾಡಿ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಇಳಿದಿದ್ದ ಚಾಲಕ ರಸ್ತೆ ಕಾಮಗಾರಿಯ ಚರಂಡಿಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ನೇಲ್ಯಡ್ಕ ಬಳಿ ನಡೆದಿದೆ.

ಮೃತ ಲಾರಿ ಚಾಲಕ ಬೆಂಗಳೂರು ನೆಲಮಂಗಲ ನಿವಾಸಿ ಹುನಮಂತರಾಯಪ್ಪ (60) ಎಂದು ಗುರುತಿಸಲಾಗಿದೆ. ಆ.27ರಂದು ಮಂಗಳೂರಿನಿಂದ ಬೆಂಗಳೂರು ಕಡೆಗೆ ಲಾರಿಯನ್ನು ಚಲಾಯಿಸಿಕೊಂಡು ಬಂದಿದ್ದು. ಆ.28ರಂದು ಮುಂಜಾನೆ ಸುಮಾರು 1 ಗಂಟೆಯ ಸುಮಾರಿಗೆ ನೇಲ್ಯಡ್ಕದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ, ಮೂತ್ರವಿಸರ್ಜನೆ ಅಥವಾ ಇನ್ಯಾವುದೋ ಕಾರಣಕ್ಕಾಗಿ ಲಾರಿಯಿಂದ ಇಳಿದು ರಸ್ತೆ ಬದಿಗೆ ಹೋದಾಗ ಆಕಸ್ಮಿಕವಾಗಿ ಕಾಮಗಾರಿಯಲ್ಲಿದ್ದ ಕಾಂಕ್ರೀಟ್ ಚರಂಡಿಯೊಳಗೆ ಬಿದ್ದು ಅಸ್ವಸ್ಥರಾದರು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಸಮಯ ದಾರಿ ಮಧ್ಯೆ ಮೃತಪಟ್ಟಿದ್ದಾರೆಂದು ಎಂದು ವರದಿಯಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೃತರ ಪುತ್ರ ಬೆಂಗಳೂರು ನೆಲಮಂಗಲ ನಿವಾಸಿ ರಾಜಶೇಖರ ಎಂಬವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

  •  

Leave a Reply

error: Content is protected !!