

ಕೊಕ್ಕಡ: ಶ್ರೀ ಗಣೇಶ ಚೌತಿ ಪ್ರಯುಕ್ತ ಗೆಳೆಯರ ಬಳಗ ಪಟ್ರಮೆಯ ನೇತೃತ್ವದಲ್ಲಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಅನಾರು ಸರಕಾರಿ ಉನ್ನತ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಶ್ರಮದಾನ ಕಾರ್ಯಕ್ರಮ ನೆರವೇರಿತು.
ಹಿರಿಯ ಕೃಷಿಕ ಡೊಂಬಯ್ಯ ಗೌಡ ಅವರು ತೆಂಗಿನ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಶಾಲಾ ಆವರಣದಲ್ಲಿ ತುಂಬಿದ್ದ ಇದ್ದ ಕಳೆಗಳನ್ನು ಸಮಾಧಾನದ ಮೂಲಕ ತೆಗೆದು ಸ್ವಚ್ಛಗೊಳಿಸಿದರು ಹಾಗೂ ತೆಂಗಿನ ಗಿಡಗಳಿಗೆ ಸೊಪ್ಪು ಹಾಕಲಾಯಿತು.
ಶಿರೀಷ್ ರಾಜ್ ಸಂಕೇಶ, ಅಣ್ಣು ಗೌಡ ಹಿರ್ತಡ್ಕ, ಚಂದ್ರಶೇಖರ ಗೌಡ ಅನಾರು, ಶಾಯಿದಾ, ಶಾಲೆ ಹೀಗೆ ದಾನ ನೀಡಿದ ಒಟ್ಟು 12 ತೆಂಗಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೂ ಪ್ರಾಮುಖ್ಯತೆ ನೀಡಲಾಯಿತು. ಜಯಂತ ಪಾದೇಜಾಲು, ದಿನೇಶ್ ಮೈಕೆ, ದೊಲ್ಲ ಗೌಡ ಜಾಲು ಬಲ್ಲೆ ಸ್ವಚ್ಚಗೊಳಿಸಲು ಯಂತ್ರೋಪಕರಣಗಳನ್ನು ಒದಗಿಸಿದರು, ಆರಿಷ್ ಪಟ್ರಮೆ ಪಿಕಪ್ ವಾಹನ ಒದಗಿಸಿ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಚೋಮ ಪಾದೇಜಾಲು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಧನಂಜಯ ಗೌಡ, ಉಪಾಧ್ಯಕ್ಷೆ ರೇವತಿ, ಮಾಜಿ ಅಧ್ಯಕ್ಷರು ದೊಳ್ಳ ಗೌಡ, ಶ್ಯಾಮರಾಜ್, ಶಾಲಾ ಶಿಕ್ಷಕ ಜಯಂತ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಮಲ, ಪಟ್ರಮೆ ಡಿವೈಎಫ್ಐ ಅಧ್ಯಕ್ಷ ಭುವನೇಶ್ ನೆಕ್ಕರೆ, ಶಾಲಾ ಬಿಸಿಯೂಟ ನೌಕರರಾದ ರೇಖಾ, ಗೀತಾ ಹಾಗೂ ಮೂವತ್ತಕ್ಕೂ ಹೆಚ್ಚು ಶ್ರಮದಾನಿಗಳು ಪಾಲ್ಗೊಂಡು ಶ್ರಮ ಹಂಚಿಕೊಂಡರು.
ನ್ಯಾಯವಾದಿ ಬಿ.ಯಂ.ಭಟ್ ಎಲ್ಲ ಶ್ರಮದಾನಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.











