
ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಲಾವತಡ್ಕ ನಿವಾಸಿ ಜೋಸೆಫ್ ಎಂಬವರ ಕೃಷಿ ತೋಟಕ್ಕೆ ಎರಡು ಕಾಡಾನೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಎರಡು ಕಾಡಾನೆಯ ದಾಳಿಯಿಂದ ಸುಮಾರು ನೂರರಷ್ಟು ವಿವಿಧ ಜಾತಿಯ ಬಾಳೆ ಗಿಡ, ಅಡಿಕೆ ಮರ, ತೆಂಗಿನ ಗಿಡ ಹಾನಿಯಾಗಿ ರೈತರಿಗೆ ಅಪಾರ ನಷ್ಟ ಅನುಭವಿಸಿದೆ.
ಪದೇಪದೇ ಕೃಷಿ ತೋಟಗಳಿಗೆ ಆನೆ ದಾಳಿಯಿಂದ ರೈತರಿಗೆ ಅಪಾರ ನಷ್ಟ ಉಂಟಾಗಿದ್ದು. ಅರಣ್ಯ ಇಲಾಖೆ ತಕ್ಷಣ ಗ್ರಾಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.










