ಶಿಬಾಜೆಯಿಂದ ಧರ್ಮಸ್ಥಳದತ್ತ ಭವ್ಯ ಧರ್ಮ ಸಂರಕ್ಷಣಾ ಯಾತ್ರೆ – ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಗ್ರಾಮಸ್ಥರು

ಶೇರ್ ಮಾಡಿ

ಶಿಬಾಜೆ: ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ಕಾಪಾಡುವ ಉದ್ದೇಶದಿಂದ ಶಿಬಾಜೆ ಗ್ರಾಮಸ್ಥರು ಭವ್ಯವಾಗಿ ಆಯೋಜಿಸಿದ್ದ ಧರ್ಮ ಸಂರಕ್ಷಣಾ ಯಾತ್ರೆ ಆ.29 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೇತೃತ್ವದಲ್ಲಿ, ಶಿಬಾಜೆಯ ದುರ್ಗಾಪರಮೇಶ್ವರಿ ಭಜನ ಮಂಡಳಿ, ಪೆರ್ಲದ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಬೂಡದಮಕ್ಕಿಯ ಶ್ರೀ ಭುವನೇಶ್ವರಿ ಭಜನಾ ಮಂಡಳಿ ಹಾಗೂ ಗ್ರಾಮದ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ಈ ಭವ್ಯ ಯಾತ್ರೆ ಜರುಗಿತು.

ಭಕ್ತರ ಸಮೂಹವು ಅಲಂಕೃತ ರಥದೊಂದಿಗೆ ವಾಹನಗಳ ಮೂಲಕ ಧರ್ಮಸ್ಥಳ ತಲುಪಿದ್ದು, ಅಲ್ಲಿ ಪಾದಯಾತ್ರೆಯ ಮೂಲಕ ದೇವಸ್ಥಾನ ಪ್ರವೇಶಿಸಿದರು. ನಂತರ ನಡೆದ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ದೇವರು ದರ್ಶನ ಪಡೆದರು.

ಬಳಿಕ ಗ್ರಾಮಸ್ಥರು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಚನ ಪಡೆದರು. ಗ್ರಾಮಸ್ಥರ ಪ್ರೀತಿ, ಭಕ್ತಿ ಹಾಗೂ ಧರ್ಮನಿಷ್ಠೆಯನ್ನು ಮೆಚ್ಚಿದ ಹೆಗ್ಗಡೆಯವರು, “ನಾನು ಆಗಲಿ ನನ್ನ ಕುಟುಂಬದವರು ಆಗಲಿ, ಯಾವತ್ತೂ ಧರ್ಮಕ್ಕೆ ಕುತ್ತು ತರದಿರಲು ಬದ್ಧ. ನಿಮ್ಮೆಲ್ಲರ ಪ್ರೀತಿ ನನಗೆ ಹರ್ಷ ತಂದಿದೆ” ಎಂದು ತಿಳಿಸಿ ಗ್ರಾಮಸ್ಥರಿಗೆ ಆಶೀರ್ವಾದ ನೀಡಿದರು.

ಈ ಸಂದರ್ಭದಲ್ಲಿ ಮೊಂಟೆತ್ತಡ್ಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರು, ಗ್ರಾಮದ ಹಿರಿಯರು, ಮಹಿಳೆಯರು ಹಾಗೂ ಯುವಕರು ಸಕ್ರಿಯವಾಗಿ ಭಾಗವಹಿಸಿದರು.

  •  

Leave a Reply

error: Content is protected !!