ಕೊಣಾಲು, ಆಲಂತಾಯ ಗ್ರಾಮ ಆಡಳಿತಾಧಿಕಾರಿ ಸುನಿಲ್ ಎಂ.ಎಸ್. ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ನೆಲ್ಯಾಡಿ: ಕೊಣಾಲು ಹಾಗೂ ಆಲಂತಾಯ ಗ್ರಾಮ ಆಡಳಿತಾಧಿಕಾರಿ ಸುನಿಲ್ ಎಂ.ಎಸ್. (53) ಅವರು ಹೃದಯಾಘಾತದಿಂದ ಆ.30ರಂದು ಉಪ್ಪಿನಂಗಡಿಯ ತಮ್ಮ ನಿವಾಸದಲ್ಲಿ ನಿಧನರಾದರು.

ಮೂಲತಃ ಮಂಗಳೂರಿನ ಮಂಗಳಾದೇವಿ ನಿವಾಸಿಯಾಗಿದ್ದ ಅವರು, ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸಿಸುತ್ತಿದ್ದರು. 2003ರಲ್ಲಿ ಉಪ್ಪಿನಂಗಡಿ ಗ್ರಾಮಕರಣಿಕರಾಗಿ ನೇಮಕಗೊಂಡ ಬಳಿಕ ಹಿರೇಬಂಡಾಡಿ, ಬಜತ್ತೂರು, ಕೌಕ್ರಾಡಿ, ಗೋಳಿತೊಟ್ಟು ಸೇರಿದಂತೆಅನೇಕ ಕಡೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಕೊಣಾಲು ಹಾಗೂ ಆಲಂತಾಯ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರಿಗೆ ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.

  •  

Leave a Reply

error: Content is protected !!