


ನೆಲ್ಯಾಡಿ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸ್ಥಾಪನಾ ದಿನಾಚರಣೆಯನ್ನು ನೆಲ್ಯಾಡಿ ಶಾಖೆಯಲ್ಲಿ ಮಂಗಳವಾರ ಸರಳ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷರಾದ ಸುಪ್ರೀತಾ ರವಿಚಂದ್ರ ಉದ್ಘಾಟಿಸಿ ಮಾತನಾಡಿ, “2002ರ ಸೆಪ್ಟೆಂಬರ್ 2ರಂದು ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಜಗನ್ನಾಥ ಬೊಮ್ಮೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪ್ರಾರಂಭಗೊಂಡಿತು. 2014ರ ಜೂನ್ 8ರಂದು ನೆಲ್ಯಾಡಿಯಲ್ಲಿ ಶಾಖೆ ಆರಂಭಗೊಂಡಿದ್ದು, ಪ್ರಸ್ತುತ ಸಂಘವು 10 ಶಾಖೆಗಳ ಮೂಲಕ ಸಕ್ರಿಯವಾಗಿ ವ್ಯವಹಾರ ನಡೆಸುತ್ತಾ 7693ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ಪ್ರಸ್ತುತ ಚಿದಾನಂದ ಬೈಲಾಡಿ ಅಧ್ಯಕ್ಷರಾಗಿ, ಯು.ಪಿ ರಾಮಕೃಷ್ಣ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘವು ಉತ್ತಮ ಪ್ರಗತಿಪರ ವ್ಯವಹಾರ ನಡೆಸಿ ಸಮುದಾಯದ ಆರ್ಥಿಕ ಬಲವರ್ಧನೆಯಲ್ಲಿ ಶ್ರೇಷ್ಠ ಪಾತ್ರವಹಿಸಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರಾದ ನಾಗೇಶ್ ನುಳಿಯಾರ್, ಸುರೇಶ್ ಪಡಿಪಂಡ, ಜಿನ್ನಪ್ಪ ಗೌಡ ಪೊಸೊಳಿಗೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಶಾಖಾ ಪ್ರಬಂಧಕಿ ತೇಜಸ್ವಿನಿ, ಕಿರಿಯ ಗುಮಾಸ್ತ ವಿಜಯ್ ಕುಮಾರ್ ಎಂ, ಅಟೆಂಡರ್ ಅಜಿತ್ ಬಿ.ಕೆ., ಪಿಗ್ಮಿ ಸಂಗ್ರಹಕರಾದ ತೀರ್ಥೇಶ್, ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.








