

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಮಾದೇರಿ ಕಾರ್ಯಕ್ಷೇತ್ರದ ಭಾಗ್ಯಜ್ಯೋತಿ ಸಂಘದ ಸದಸ್ಯೆಯಾಗಿರುವ ಲಕ್ಷ್ಮಿ ಅವರಿಗೆ ಪಾರ್ಶ್ವವಾಯು ರೋಗದಿಂದ ದೇಹದ ಎಡಭಾಗ ಸಂಪೂರ್ಣ ಸ್ವಾದೀನತೆ ಕಳೆದುಕೊಂಡಿದ್ದು, ನಡೆಯಲು ಅಸಮರ್ಥರಾಗಿದ್ದಾರೆ.ಇಂತಹ ಸಂದರ್ಭದಲ್ಲಿ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರದಿಂದ ದೊರೆತ ಕಮಾಂಡ್ ವೀಲ್ ಚೇರ್ ಅನ್ನು ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿ ಜೆ, ವಲಯ ಮೇಲ್ವಿಚಾರಕರಾದ ಆನಂದ ಡಿ ಬಿ, ತರಬೇತಿ ಮೇಲ್ವಿಚಾರಕರಾದ ಶಿವಕುಮಾರ್, ಒಕ್ಕೂಟದ ಪದಾಧಿಕಾರಿಗಳಾದ ಕಮಲಾಕ್ಷ ಗೌಡ, ದಯಾಮಣಿ, ವಿ ಎಲ್ ಇ ಹರ್ಷಿತ, ಸೇವಾ ಪ್ರತಿನಿಧಿ ಸಂತೋಷ್ ಕೆ ಎಂ ಹಾಗೂ ಲಕ್ಷ್ಮಿಯವರ ಕುಟುಂಬಸ್ಥರು ಉಪಸ್ಥಿತರಿದ್ದರು.






