ಹೊಸಮಜಲು ಆಲ್ ಮಸ್ಜಿದುಲ್ ಜಲಾಲಿಯ ಮಸೀದಿಯಲ್ಲಿ ಈದ್ ಮಿಲಾದ್ ಸಂಭ್ರಮ

ಶೇರ್ ಮಾಡಿ

ನೆಲ್ಯಾಡಿ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1500ನೇ ಜನ್ಮದಿನದ ಅಂಗವಾಗಿ ಹೊಸಮಜಲು ಆಲ್ ಮಸ್ಜಿದುಲ್ ಜಲಾಲಿಯ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬವನ್ನು ವೈಭವಯುತವಾಗಿ ಹಾಗೂ ಭಕ್ತಿಭಾವಪೂರ್ಣವಾಗಿ ಆಚರಿಸಲಾಯಿತು.

ಬೆಳಿಗ್ಗೆ ಮಸ್ಜಿದ್ ಆವರಣದಲ್ಲಿ ನಡೆದ ಧ್ವಜಾರೋಹಣವನ್ನು ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೆ. ನೆರವೇರಿಸಿದರು. ಬಳಿಕ ಧಾರ್ಮಿಕ ಪ್ರಾರ್ಥನೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ನಂತರ ಪೇಟೆಯಲ್ಲಿ ಬೃಹತ್ ಮೆರವಣಿಗೆ ಜರುಗಿತು. ದಫ್, ಸ್ಕೌಟ್ ಮತ್ತು ರಾಲಿ ಮೆರವಣಿಗೆಗೆ ವಿಶೇಷ ಆಕರ್ಷಣೆ ಹೆಚ್ಚಿಸಿದ್ದು, ನೂರಾರು ಭಕ್ತರು ಉತ್ಸಾಹಭರಿತವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಮೆರವಣಿಗೆ ಉದ್ದಕ್ಕೂ ಸ್ಥಳೀಯರು ಪರಸ್ಪರ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ಹಂಚಿಕೊಳ್ಳುವ ಮೂಲಕ ಹಬ್ಬದ ಸಂತಸವನ್ನು ಹಂಚಿಕೊಂಡರು.

ಮಸೀದಿಯ ಪಕ್ಕದಲ್ಲಿ ನಿರ್ಮಿಸಲಾದ ಮದೀನಾ ಗುಂಬಜ್ ಟ್ಯಾಬ್ಲೂ ಹಾಗೂ ಕಾರಂಜಿ ಜನರನ್ನು ಸೆಳೆದವು. ಜೊತೆಗೆ ಹಳೆಯ ಕಾಲದಲ್ಲಿ ಬಳಕೆಯಾಗುತ್ತಿದ್ದ ವಿವಿಧ ವಸ್ತುಗಳ ಪ್ರದರ್ಶನವು ನಡೆಯಿತು.

ಕಾರ್ಯಕ್ರಮದಲ್ಲಿ ಖತೀಬರಾದ ಪಿ.ಬಿ ಸಂಶೀರ್ ಸಖಾಪಿ ಪರಪ್ಪು, ಮದರಸದ ಅಧ್ಯಾಪಕರಾದ ಸತ್ತಾರ್ ಹಿಶಾಮಿ, ಸಂಶುದ್ದೀನ್ ಫಾರೂಕಿ, ಮಸೀದಿಯ ಆಡಳಿತ ಕಮಿಟಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಕೆ.ಮತ್ತು ಪದಾಧಿಕಾರಿಗಳು, ಸ್ವಾಗತ ಸಮಿತಿಯ ಅಧ್ಯಕ್ಷ ಮೊಯಿದ್ದೀನ್ ಆರ್.ಆರ್.ಮತ್ತು ಪದಾಧಿಕಾರಿಗಳು, ಸಂಸ್ಥೆಯ ಜಮಾತಿಗರು, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು. 

  •  

Leave a Reply

error: Content is protected !!