

ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ ಶನಿವಾರದಂದು ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮವು ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರ ಅನುಮತಿಯೊಂದಿಗೆ ವಿದ್ಯಾರ್ಥಿಗಳ ಪ್ರಾರ್ಥನೆಯಿಂದ ಆರಂಭವಾಯಿತು. ಸಭಾಧ್ಯಕ್ಷರಾದ ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ.ಸೀತಾರಾಮ ಪಿ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯಾವುದೇ ಹಬ್ಬವು ತನ್ನ ಮೂಲ ಮೌಲ್ಯಯುತ ಸಾರವನ್ನು ಉಳಿಸಿಕೊಂಡು, ಸಾಮಾಜಿಕವಾಗಿ ಅನ್ವಯಿಸಿದಾಗ ಮಾತ್ರ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುತ್ತದೆ ಎಂದು ಹೇಳಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಆನಂದ ಎಮ್. ಕಿದೂರು ಅವರು ಓಣಂ ಹಬ್ಬದ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯನ್ನು ವಿವರಿಸಿ, ಅದರ ಅಂಗವಾಗಿ ಮಾಡುವ ಸಾಂಪ್ರದಾಯಿಕ ಊಟದ ವೈವಿಧ್ಯತೆ ಹಾಗೂ ಆಟ-ಆಟೋಟಗಳ ವಿಶೇಷತೆಯನ್ನು ವಿವರಿಸಿದರು.
ಬೋಧಕ,ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಪಾವನ ಸ್ವಾಗತಿಸಿದರು, ತೃತೀಯ ಬಿಕಾಂ ವಿದ್ಯಾರ್ಥಿನಿ ಕುಮಾರಿ ವೀಕ್ಷಾ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ ಕುಮಾರಿ ವೃಂದಾ ಮತ್ತು ಕುಮಾರಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.






