

ನೆಲ್ಯಾಡಿ: ಜೇಸಿಐ ನೆಲ್ಯಾಡಿ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ಆಶ್ರಯದಲ್ಲಿ 42ನೇ ವರ್ಷದ ಜೇಸಿ ಸಪ್ತಾಹ–2025 ‘ಸಪ್ತ ಸಂಭ್ರಮ’ ಸೆ.9ರಿಂದ 15ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಜೆಸಿಐ ನೆಲ್ಯಾಡಿ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ಸೆ.9ರಂದು ಸಂಜೆ 4.30ಕ್ಕೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಜೇಸಿ ಧ್ವಜಾರೋಹಣದೊಂದಿಗೆ ಸಪ್ತಾಹಕ್ಕೆ ಚಾಲನೆ ಸಿಗಲಿದೆ. ಜೇಸಿಐ ವಲಯ ಸಂಯೋಜಕ ಜಿತೇಶ್ ಪಿರೇರಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ನಂತರ ವಾಕಥಾನ್, ಆಶ್ರಮ ಭೇಟಿ, ಹಣ್ಣು–ಹಂಪಲು ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೆ.10ರಂದು ಮಧ್ಯಾಹ್ನ 11.30ಕ್ಕೆ ನೆಲ್ಯಾಡಿ ಸಂತ ಜಾರ್ಜ್ ಪ.ಪೂ. ಕಾಲೇಜಿನಲ್ಲಿ, ಮಧ್ಯಾಹ್ನ 2.00ಕ್ಕೆ ನೆಲ್ಯಾಡಿ ಯುನಿವರ್ಸಿಟಿ ಕಾಲೇಜಿನಲ್ಲಿ ಜೀವನ ಕೌಶಲ್ಯ ಮತ್ತು ಸಾಮರ್ಥ್ಯ ವರ್ಧನೆ ತರಬೇತಿ ನಡೆಯಲಿದೆ.
ಸೆ.11ರಂದು ಬೆಳಿಗ್ಗೆ 10.30ರಿಂದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಅಶ್ವಿನಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸಂಘದ ವಠಾರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಸೆ.12ರಂದು ಮಧ್ಯಾಹ್ನ 2.30ಕ್ಕೆ ನೆಲ್ಯಾಡಿ ಬೆಥನಿ ಐಟಿಐಯಲ್ಲಿ ಲಾಭದೊಂದಿಗೆ ವ್ಯವಹಾರ ಮತ್ತು ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಾಗಾರ ನಡೆಯಲಿದೆ.
ಸೆ.13ರಂದು ಬೆಳಿಗ್ಗೆ 10ಕ್ಕೆ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕರ್ತವ್ಯಕ್ಕಗಿ ಧ್ವನಿ – ಮಾನವ ಕರ್ತವ್ಯ ಮತ್ತು ಮನವಿ ದಿನ, ಅಪರಾಹ್ನ 2ಕ್ಕೆ ಕೊಲ್ಯೊಟ್ಟು ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರಧ್ವಜ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರ ನಡೆಯಲಿದೆ.
ಸೆ.14ರಂದು ಬೆಳಿಗ್ಗೆ 9.30ರಿಂದ ನೆಲ್ಯಾಡಿ ಪಿಎಂಶ್ರೀ ಉನ್ನತೀಕರಿಸಿದ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ನೆಲ್ಯಾಡಿ ಪೇಟೆಯಲ್ಲಿ ಜೇಸಿ ಸೇರ್ಪಡೆ ಅಭಿಯಾನ ನಡೆಯಲಿದೆ.
ಸೆ.15ರಂದು ಸಂಜೆ 5.30ರಿಂದ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜೇಸಿ ಕುಟುಂಬೋತ್ಸವ ನಡೆಯಲಿದೆ. ಸಂಜೆ 7.30ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ಮೋಹನ್ ಕುಮಾರ್ ಡಿ. ಅವರಿಗೆ ಕಮಲ ಪತ್ರ ಪ್ರಶಸ್ತಿ ಪ್ರದಾನ, ಸಾಧನಾಶ್ರೀ ಪುರಸ್ಕೃತ ಮೋಹನ್ ವಿ.ಗೌಡ ಅವರಿಗೆ ಅಭಿನಂದನೆ ನಡೆಯಲಿದೆ ಎಂದು ಡಾ.ಸುಧಾಕರ ಶೆಟ್ಟಿ ಹೇಳಿದರು.
ಸೆ.7: ಕ್ರೀಡಾಕೂಟ
ಜೇಸಿ ಸಪ್ತಾಹದ ಅಂಗವಾಗಿ ಸೆ.7ರಂದು ಬೆಳಿಗ್ಗೆ 9.30ಕ್ಕೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಜೆಸಿ ಹಾಗೂ ಜೇಸಿಯೇತರ ಬಂಧುಗಳಿಗೆ ಕ್ರೀಡಾಕೂಟ ನಡೆಯಲಿದೆ. ನೆಲ್ಯಾಡಿ ಹೊರಠಾಣೆ ಹೆಡ್‍ಕಾನ್‍ಸ್ಟೇಬಲ್ ಪ್ರವೀಣ್ ಕುಮಾರ್ ಉದ್ಘಾಟಿಸಲಿದ್ದಾರೆ.






